ಡೀಫ್ ಫೇಕ್ ಮೂಲಕ ರಶ್ಮಿಕಾ ಮಂದಣ್ಣ ತದ್ರೂಪಿ ವಿಡಿಯೋ ಸೃಷ್ಠಿ; ಇದು ಮಹಾಪರಾಧ ಎಂದ್ರು ಬಿಗ್ ಬಿ

ಮುಂಬೈ : ಆರ್ಟಿಪಿಶಿಯಲ್ ಇಂಟಲಿಜೆನ್ಸಿ ಎಷ್ಟು ಮುಂದುವರೆದಿದೆ ಅಂದರೆ ಇದೀಗ ವಿಡಿಯೋಗಳನ್ನು ಡೀಫ್ ಫೇಕ್ ಮೂಲಕ ಪರಿವರ್ತಿಸಿ ಇನ್ನೊಬ್ಬರ ಮುಖವನ್ನು ಹಾಕಿ ಕ್ರಿಯೆಟ್ ಮಾಡಲಾಗುತ್ತಿದೆ. ಇದೇ ರೀತಿಯ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದು ಕನ್ನಡದ ಹೆಸರಾಂತ ನಟಿ ರಶ್ಮಿಕಾ ಮಂದಣ್ಣ ಅವರ ಹಾಟ್ ವಿಡಿಯೋ ವೈರಲ್ ಆಗಿದೆ.

ನಟಿ ರಶ್ಮಿಕಾ ಮಂದಣ್ಣ ಅವರ ಮುಖವನ್ನು ವಿಡಿಯೋದಲ್ಲಿ ಬಳಸಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಯಿತು. ಎದೆಭಾಗ ಕಾಣಿಸುವಂತೆ ಬಟ್ಟೆ ಹಾಕಿರುವ ವಿಡಿಯೋವನ್ನು ಹಲವರು ಹಂಚಿಕೊಂಡಿದ್ದರು. ರಶ್ಮಿಕಾ ಮಂದಣ್ಣ ಯಾಕೆ ಹೀಗೆ ಎಂದು ಹಲವರು ಪ್ರಶ್ನಿಸಿದ್ದರು. ಆದರೆ, ಅದು ರಶ್ಮಿಕಾ ಅವರ ವಿಡಿಯೋ ಅಲ್ಲವೆಂದು ಗೊತ್ತಾಗಿದೆ. ಅಭಿಷೇಕ್ ಅನ್ನುವವರು ಮೂಲ ವಿಡಿಯೋವನ್ನು ಪತ್ತೆ ಮಾಡಿ ಎರಡೂ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.

ವೈರಲ್ ಆಗಿರುವ ವಿಡಿಯೋ ಝರಾ ಪಟೀಲ್ ಎನ್ನುವವರದ್ದು ಎಂದು ಅಭಿಷೇಕ್ ಬರೆದುಕೊಂಡಿದ್ದಾರೆ. ಝರಾ ಪಟೇಲ್ ಅವರು ಆ ವಿಡಿಯೋವನ್ನು ಇನ್ಸ್ಟಾದಲ್ಲಿ ಶೇರ್ ಮಾಡಿದ್ದರು. ಆ ವಿಡಿಯೋಗೆ ರಶ್ಮಿಕಾ ತಲೆಯನ್ನು ಮಾಸ್ಕ್ ಮಾಡಿ ಹರಿಬಿಟ್ಟಿದ್ದರು ಕಿಡಿಕೇಡಿಗಳು. ಈ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿತ್ತು.

ಅಭಿಷೇಕ್ ಅವರು ಹಂಚಿಕೊಂಡ ಪೋಸ್ಟ್ ಅನ್ನು ಹೆಸರಾಂತ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಕೂಡ ಶೇರ್ ಮಾಡಿದ್ದರು. ಇದು ಮಹಾಪರಾಧ. ತಕ್ಷಣವೇ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಅಮಿತಾಭ್ ಹೇಳಿದ್ದಾರೆ. ಈ ರೀತಿ ಯಾರಿಗೂ ಅಪಮಾನ ಮಾಡಬಾರದು ಎಂದು ಅವರು ತಿಳುವಳಿಕೆ ನೀಡಿದ್ದಾರೆ.

You cannot copy content from Baravanige News

Scroll to Top