ಕ್ರಯೋಥೆರಪಿ ಚಿಕಿತ್ಸೆಗೆ ಒಳಗಾದ ನಟಿ ಸಮಂತಾ

ದಕ್ಷಿಣದ ಖ್ಯಾತ ನಟಿ ಸಮಂತಾ ಮಯೋಸೈಟಿಸ್ ಕಾಯಿಲೆಯಿಂದ ಬಳಲುತ್ತಿರುವ ವಿಷಯ ಗೊತ್ತೇ ಇದೆ. ಪದೇ ಪದೇ ಈ ಕಾಯಿಲೆಗಾಗಿ ನಾನಾ ಥೆರಪಿ ಪಡೆಯುತ್ತಿದ್ದಾರೆ ನಟಿ. ಖುಷಿ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ನಾನಾ ದೇಶಗಳನ್ನು ಸುತ್ತುವುದರಲ್ಲಿ ಬ್ಯುಸಿಯಾಗಿದ್ದ ನಟಿ ಇದೀಗ ಕ್ರಯೋಥೆರಪಿ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ತಿಳಿಸಿದ್ದರು, ಆ ಕುರಿತಾದ ವಿಡಿಯೋ ಕೂಡ ಶೇರ್ ಮಾಡಿದ್ದಾರೆ.

ಈ ಹಿಂದೆ ಸಮಂತಾ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದ್ದರು. ತಮಗಿರುವ ಖಾಯಿಲೆಗಾಗಿ ಸ್ಟಿರಾಯ್ಡ್ ತೆಗೆದುಕೊಂಡಿದ್ದರಿಂದ ತಮ್ಮ ದೇಹದ ಚರ್ಮ ಹಾಳಾಗಿದೆ ಎಂದು ಅವರು ಹೇಳಿಕೊಂಡಿದ್ದರು. ತಾವು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಯಾವುದೇ ಫೋಟೋ ಹಾಕಲಿ, ಅದಕ್ಕೆ ಫಿಲ್ಟರ್ ಹಾಕುವುದಾಗಿ ತಿಳಿಸಿದ್ದರು.

ವೈದ್ಯರ ಸಲಹೆ ಮೇರೆಗೆ ದೇಹದಲ್ಲಿ ಕಾಣಿಸಿಕೊಳ್ಳುತ್ತಿದ್ದ ನೋವಿಗಾಗಿ ಸ್ಟಿರಾಯ್ಡ್ ತೆಗೆದುಕೊಳ್ಳುತ್ತಿದ್ದೆ. ಅದು ಅತೀಯಾಗಿ ದೇಹ ಸೇರಿಕೊಂಡಿದ್ದರಿಂದ ಚರ್ಮಕ್ಕೆ ತೊಂದರೆ ಮಾಡಿದೆ. ವೈದ್ಯರಾದ ಚಿನ್ಮಯಿ ಶ್ರೀಪಾದ ಅವರು ಚರ್ಮವನ್ನು ಸರಿ ಮಾಡುವುದಾಗಿ ಹೇಳಿದ್ದಾರೆ. ಎಲ್ಲವೂ ಅವರ ಕೈಯಲ್ಲಿದೆ ಎಂದು ಸಮಂತಾ ಹೇಳಿಕೊಂಡಿದ್ದರು.

ಪ್ರತಿ ದಿನವೂ ಸಮಂತಾ ಲಕಲಕ ಹೊಳೆಯುವಂತಹ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದರು. ಅಭಿಮಾನಿಯೊಬ್ಬ ನೀವು ಇಷ್ಟೊಂದು ಹೊಳೆಯಲು ಮತ್ತು ಸುಂದರವಾಗಿರಲು ಕಾರಣವೇನು? ಸೌಂದರ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತಿದ್ದೀರಿ ಮತ್ತು ವೃದ್ಧಿಸಿಕೊಳ್ಳುತ್ತಿದ್ದೀರಿ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಸಮಂತಾ ನಿಜ ಉತ್ತರವನ್ನೇ ಕೊಟ್ಟಿದ್ದಾರೆ. ಎಲ್ಲ ಫೋಟೋಗಳಿಗೆ ಫಿಲ್ಟರ್ ಹಾಕುವೆ ಎಂದು ಹೇಳುವ ಮೂಲಕ ಸ್ಟಿರಾಯ್ಡ್ ಕಥೆಯನ್ನು ಹಂಚಿಕೊಂಡಿದ್ದರು.

You cannot copy content from Baravanige News

Scroll to Top