ಶಿರ್ವ : ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣವೊಂದರಲ್ಲಿ ಸೂಪರ್ ಸೇವ್ ಯೋಜನೆಯಡಿ ಕಾನೂನು ಬಾಹಿರವಾಗಿ ಹಣ ಸಂಗ್ರಹಿಸಿ ಕಳಪೆ ಗುಣಮಟ್ಟದ ಸಾಮಾಗ್ರಿ ನೀಡಿ ಜನರನ್ನು ವಂಚಿಸಿ ಮೋಸ ಮಾಡುತ್ತಿರುವ ಬಗ್ಗೆ ಶಿರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ 5 ವರ್ಷಗಳಿಂದ ಕುಬೇರ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಹೆಸರಿನಲ್ಲಿ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದ ಹರಿಪ್ರಸಾದ್ ಸ್ಥಳೀಯರನ್ನು ಸೇರಿಸಿಕೊಂಡು ಸೂಪರ್ ಸೇವ್ ಯೋಜನೆಯಡಿ ಸಾರ್ವಜನಿಕರಿಂದ ಪ್ರತೀ ವಾರ 150 ರೂ.ನಂತೆ ಹಣ ಸಂಗ್ರಹಿಸಿ ವಾರಕ್ಕೊಮ್ಮೆ ಲಕ್ಕಿ ಡ್ರಾ ಮೂಲಕ ಆಕರ್ಷಕ ಬಹುಮಾನ ನೀಡುವ ಅಮಿಷ ಒಡ್ಡಿ ಗ್ರಾಹಕರಿಗೆ ಕಳಪೆ ಗುಣಮಟ್ಟದ ಸಾಮಗ್ರಿ ನೀಡಿ ವಂಚಿಸಿ ಮೋಸಗೊಳಿಸಿದ್ದಾನೆ ಎಂದು ದಿನೇಶ್ ಅವರು ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.