ಬೆಚ್ಚ ಬೆಚ್ಚ ನ್ಯೂಸ್
ಉಡುಪಿ ಡಿಸ್ಟ್ರಿಕ್ಟ್ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಶನ್ ರಿ. ಉಡುಪಿ – ವಾರ್ಷಿಕ ಮಹಾಸಭೆ!
15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿ‌ನ್‌ ಸನಿಲ್‌ ಕುರ್ಕಾಲು!
ಪುತ್ತೂರು : ಮುಸ್ಲಿಂ ಯುವತಿಗೆ ಚೂರಿ ಇರಿದ ಹಿಂದೂ ಯುವಕ : ಆಸ್ಪತ್ರೆಗೆ ದಾಖಲು!
ಬಟ್ಟೆ ಕೊಳ್ಳುವ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ : ಕೊಲೆಯಲ್ಲಿ ಗಲಾಟೆ ಅಂತ್ಯ
ಶಿರ್ವ: ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಂಸ್ಥಾಪಕ ಗೇಬ್ರಿಯಲ್ ನಜರೆತ್ ನಿಧನ
ಅಧಿಕ ಲಾಭಾಂಶ ಆಮಿಷ ; ಹಿರಿಯ ನಾಗರಿಕರಿಗೆ ಲಕ್ಷಾಂತರ ರೂ.ವಂಚನೆ
ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಖಂಡಿಸಿ ಮೆರವಣಿಗೆ, ಮುಷ್ಕರ
ಸೂಡ ಶ್ರೀ ಸುಬ್ರಹ್ಮಣ್ಯ ಕುಣಿತ ಭಜನಾ ಮಂಡಳಿ ಉದ್ಘಾಟನಾ ಸಮಾರಂಭ
ತಂದೆಯನ್ನು ಆಸ್ಪತ್ರೆಗೆ ಸೇರಿಸಿ ಕಾರಿನಲ್ಲಿ ಎಸಿ ಹಾಕಿ ಮಲಗಿದ್ದ ಮಗ ಸಾವು
ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರಿಂದ ಅನುಮತಿ
Next
Prev

ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಎಸ್.ಪಿ ಬಿಚ್ಚಿಟ್ಟ ರೋಚಕ ಸಂಗತಿ?

ಉಡುಪಿ : ತಾಲೂಕಿನ ನೇಜಾರು ಸಮೀಪದ ತೃಪ್ತಿನಗರದಲ್ಲಿ ನವೆಂಬರ್ 12 ರಂದು ಒಂದೇ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿತ್ತು. ಆರೋಪಿ ಹತ್ಯೆ ಮಾಡಿದ ಬಳಿಕ ಪೊಲೀಸರಿಗೆ ಸುಳಿವು ಸಿಗದಂತೆ ಉಡುಪಿ ನಗರದೊಳಗೆ ನಾಲ್ಕು ಬಾರಿ ವಾಹನ ಬದಲಾಯಿಸಿ ಪರಾರಿಯಾಗಿದ್ದ. ಈ ಹಿನ್ನಲೆ ಆರೋಪಿಯನ್ನು ಕಂಡುಹಿಡಿಯಲು ಪೊಲೀಸರು ತಡಕಾಡುವಂತಾಗಿತ್ತು. ನಂತರ ಪೊಲೀಸರು ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ಕೊಲೆಗಾರನ ಪತ್ತೆಗೆ ಬಲೆ ಬೀಸಿದ್ದರು. ಕೊನೆಗೆ ಹಂತಕನನ್ನು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಉಡುಪಿ ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಉಡುಪಿ ಎಸ್.ಪಿ ಡಾ.ಅರುಣ್ ಪತ್ರಿಕಾಗೋಷ್ಠಿ ಕರೆದಿದ್ದು, ಹತ್ಯೆಯ ಕುರಿತು ಸತ್ಯಾಂಶವನ್ನು ಬಿಚ್ಚಿಟ್ಟಿದ್ದಾರೆ.

ಒಬ್ಬಳ ಮೇಲಿನ ದ್ವೇಷದಿಂದ ನಡೆಯಿತಾ ನಾಲ್ವರ ಕೊಲೆ?

ಇನ್ನು ಈ ಕುರಿತು ಮಾತನಾಡಿದ ಎಸ್ಪಿ ಡಾ.ಅರುಣ್ ‘ನಾಲ್ವರ ಹತ್ಯೆಯನ್ನು ಮಾಡಿರುವುದಾಗಿ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಒಪ್ಪಿಕೊಂಡಿದ್ದಾರೆ. ಮೇಲ್ನೋಟಕ್ಕೆ ಹತ್ಯೆಗೆ ಮೂರ್ನಾಲ್ಕು ಕಾರಣಗಳು ಇರುವ ಸಾಧ್ಯತೆಯಿದೆ. ಸಂಪೂರ್ಣ ತನಿಖೆ ಮಾಡದೆ ಕಾರಣ ಹೇಳಲು ಸಾಧ್ಯವಿಲ್ಲ. ಆರೋಪಿ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿದ್ದಾನೆ. ಅವನ ಉದ್ದೇಶ ಆಯ್ನಾಸ್ ಕೊಲೆ ಮಾಡುವುದಾಗಿತ್ತು. ಆದರೆ, ಈ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಮತ್ತು ಸಾಕ್ಷಿ ನಾಶ ಮಾಡಲು ಉಳಿದವರನ್ನು ಕೊಲೆ ಮಾಡಿರುವ ಬಗ್ಗೆಯೋ ಒಪ್ಪಿಕೊಂಡಿದ್ದಾನೆ’ ಎಂದರು.

ಮದುವೆಯಾಗಿ ಮಕ್ಕಳಾಗಿದ್ರು ಅಯ್ನಾಸ್ ಮೇಲೆ ಲವ್

ಪೊಲೀಸರ ವಿಚಾರಣೆ ವೇಳೆ ಆರೋಪಿ ಪ್ರವೀಣ್ ಅರುಣ್ ಚೌಗಲೆ ಸತ್ಯಾಂಶ ಬಿಚ್ಚಿಟ್ಟಿದ್ದು, ‘ಸ್ನೇಹ, ಸಲುಗೆ, ಪ್ರೇಮ ಮತ್ತು ಹಣದ ವಿಚಾರದಿಂದ ಕೊಲೆ ಮಾಡಿದ್ದಾಗಿ ಹೇಳಿದ್ದಾರೆ. ಮದುವೆಯಾಗಿ ಮಕ್ಕಳಾಗಿದ್ರು ಅಯ್ನಾಸ್ ಮೇಲೆ ಆರೋಪಿಗೆ ಲವ್ ಆಗಿತ್ತು. ಆಯ್ನಾಸ್ ಕೂಡ ಪ್ರವೀಣ್ ಜೊತೆ ಸಲುಗೆಯಿಂದ ಇದ್ದಳು. ಈ ವಿಚಾರವನ್ನು ಅಯ್ನಾಸ್‌ ಲೈಟ್ ಆಗಿ ಸ್ವೀಕರಿಸಿದ್ದರೆ, ಆರೋಪಿ ಪ್ರವೀಣ್ ಮಾತ್ರ ತನ್ನ ಪ್ರೀತಿಯನ್ನು ಗಂಭೀರವಾಗಿ ಪರಿಣಗಣಿಸಿದ್ದ. ಈ ಮಧ್ಯೆ ಇಬ್ಬರ ನಡುವೆ ಹಣದ ವ್ಯವಹಾರ ಕೂಡ ನಡೆದಿದ್ದು, ಈ ವಿಚಾರ ಎರಡು ಕುಟುಂಬಕ್ಕೂ ಗೊತ್ತಾಗಿ ಗಲಾಟೆ ಕೂಡ ಆಗಿತ್ತು.

ಮೃತ ಅಯ್ನಾಸ್ ಜೊತೆ ಜಗಳವಾಡಿದ್ದ ಆರೋಪಿ ಪ್ರವೀಣ್ ನ ಪತ್ನಿ

ಇನ್ನು ಮನೆಯವರ ಗಲಾಟೆಯ ನಡುವೇಯೇ ಆರೋಪಿ ಪ್ರವೀಣ್ ಪತ್ನಿ, ಮೃತ ಅಯ್ನಾಸ್ ಜೊತೆ ಜಗಳವಾಡಿದ್ದರು. ಇದಾದ ಬಳಿಕ ಅಯ್ನಾಸ್ ಪ್ರವೀಣ್ನನ್ನು ರಿಜೆಕ್ಟ್ ಮಾಡಿದ್ದಳು. ಈ ಹಿನ್ನಲೆ ಆಕೆಯನ್ನು ಕೊಲ್ಲುವ ನಿರ್ಧಾರ ಮಾಡಿದ್ದಾನೆ. ಅದರಂತೆ ನ.12 ರಂದು ಮನೆಗೆ ನುಗ್ಗಿ ಆಕೆಯನ್ನು ಹತ್ಯೆ ಮಾಡಲು ಮುಂದಾಗಿದ್ದ, ಈ ವೇಳೆ ಅಕೆಯ ಕೊಲೆಗೆ ಅಡ್ಡಪಡಿಸಿದವರನ್ನೆಲ್ಲರನ್ನು ಕೂಡ ಕೊಂದಿದ್ದಾಗಿ ಆರೋಪಿ ಪ್ರವೀಣ್ ಹೇಳಿದ್ದಾನೆ.

ಆರೋಪಿಯನ್ನು ಬಂಧಿಸಿದ್ದೇ ರೋಚಕ

ಹೌದು, ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿ, ಯಾವುದೇ ಸಾಕ್ಷಿ ಬಿಡದೇ ಪರಾರಿಯಾಗಿದ್ದ ಹಂತಕನನ್ನು ಬಂಧಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇನ್ನು ಈ ಆರೋಪಿಯನ್ನು ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹ ಮಾಡಿ ಬಂಧಿಸಿದ್ದೇವೆ. ಇಂದೇ ಆರೋಪಿ ಪ್ರವೀಣ್ನನ್ನು ಕೋರ್ಟ್ಗೆ ಹಾಜರುಪಡಿಸುತ್ತೇವೆ. ಅಯ್ನಾಝ್, ಚೌಗುಲೆ ನಡುವಿನ ಸಂಬಂಧ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಇನ್ನು ಆರೋಪಿ ಪ್ರವೀಣ್ ಚೌಗುಲೆಗೆ ಮದುವೆಯಾಗಿದೆ ಎಂದು ಉಡುಪಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಹೇಳಿದರು.

Related Posts

Scroll to Top