ಮೊಹಾಲಿ : ಬೀಗ ಹಾಕಿರೋ ಮನೆಗೆ ನುಗ್ಗಿ ಚಿನ್ನ, ಬೆಳ್ಳಿ ಕಳ್ಳತನ ಮಾಡಿರೋದನ್ನ ಇಷ್ಟು ದಿನ ನೋಡಿದ್ವಿ. ಅಷ್ಟೇ ಯಾಕೆ ಮನೆ ಮುಂದೆ ನಿಲ್ಲಿಸಿರೋ ಬೈಕ್, ಕಾರು ಕದಿಯೋದನ್ನ ಕೇಳಿದ್ದೀವಿ. ಅರೆ ಇಲ್ನೋಡಿ ಮನೆ ಮುಂದೆ ಇಟ್ಟಿರೋ ಫ್ಲವರ್ ಪಾಟ್ಗಳನ್ನು ಕಳ್ಳತನ ಮಾಡೋ ಚಾಳಿ ಶುರುವಾಗಿದೆ.
ಕಾರಿನಲ್ಲಿ ಸ್ಟೈಲ್ ಆಗಿ ಬರೋ ಯುವತಿಯರು ಮನೆ ಮುಂದೆ ಇಟ್ಟಿರೋ ಫ್ಲವರ್ ಪಾಟ್ಗಳನ್ನು ಕದ್ದುಕೊಂಡು ಹೋಗಿರೋ ಘಟನೆ ಪಂಜಾಬ್ನಲ್ಲಿ ನಡೆದಿದೆ.
ಮೊಹಾಲಿಯ ಸೆಕ್ಟರ್ 78ರ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಫ್ಲವರ್ ಪಾಟ್ ಕಳ್ಳಿಯರ ಖತರ್ನಾಕ್ ದೃಶ್ಯ ಸೆರೆಯಾಗಿದೆ.
ಸಿಸಿಟಿವಿ ವಿಡಿಯೋದಲ್ಲಿ ಇಬ್ಬರು ಯುವತಿಯರು ಐಷಾರಾಮಿ ಕಾರಿನಲ್ಲಿ ಬಂದು ಮನೆಯಲ್ಲಿ ಯಾರು ಇಲ್ಲದಿರೋದನ್ನ ಗಮನಿಸುತ್ತಾರೆ. ತಕ್ಷಣವೇ ಮನೆ ಖಾಲಿ ಇರೋದು ಪಕ್ಕಾ ಆಗುತ್ತಿದ್ದಂತೆ ಮನೆ ಮುಂದಿರುವ ಫ್ಲವರ್ ಪಾಟ್ಗಳನ್ನ ಎತ್ತಾಕೊಂಡು ಓಡಿ ಹೋಗಿದ್ದಾರೆ. ಕಳೆದ ಒಂದು ವಾರದಲ್ಲಿ ಇಂತಹದೇ 10ಕ್ಕೂ ಹೆಚ್ಚು ಪ್ರಕರಣಗಳು ಮೊಹಾಲಿಯಲ್ಲಿ ನಡೆದಿದೆ.
ಕಳ್ಳಿಯರು ಮಾಡಿರೋ ಈ ಖತರ್ನಾಕ್ ಕಳ್ಳತನದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.