ಭಾರತ ಇದೇ ಟ್ರೋಫಿಗಾಗಿ ಕನಸು ಕಂಡಿತ್ತು. 12 ವರ್ಷದಿಂದ ಕಾದು ಕುಳಿತ್ತಿತ್ತು. ಆದರೆ ಈ ಬಾರಿಯು ಕಪ್ ಕೈ ತಪ್ಪಿ ಹೋಯಿತು. ಆಸ್ಟ್ರೇಲಿಯಾದ ಒಡಲಿಗೆ ಈ ಬಾರಿಯ ವಿಶ್ವಕಪ್ ಸೇರಿತು. ಆದರೆ ಕಪ್ ಗೆದ್ದ ಬೆನ್ನಲ್ಲೇ ಆಸೀಸ್ ಆಟಗಾರನ ದುರಂಹಕಾರ ಪರಮಾವಧಿಯೊಂದು ಎದ್ದು ಕಂಡಿದೆ. ಸಾಮಾಜಿಕ ಜಾಲತಾಣದಲ್ಲಿ ದೃಶ್ಯವೊಂದು ವೇರಲ್ ಆಗಿದ್ದು, ಇದು ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಸತತ ಗೆಲುವು ಕಂಡ ಭಾರತಕ್ಕೆ ನಿನ್ನೆ ಮಾತ್ರ ಅದೃಷ್ಠ ಲಕ್ಷ್ಮಿ ಕೈ ಬಿಟ್ಟಳು. 5 ಬಾರಿ ಗೆದ್ದ ಆಸೀಸ್ ಪಾಲಿಗೆ ಈ ಬಾರಿಗೆ ಟ್ರೋಫಿಯನ್ನಿಟ್ಟಳು. ಆದರೆ ಇಷ್ಟೆಲ್ಲಾ ಕಟ್ಟಪಟ್ಟು ಫೈನಲ್ ಸೇರಿದ ಆಸೀಸ್ಗೆ ಈ ಟ್ರೋಫಿ ಅಷ್ಟು ಸುಲಭವಾಗಿ ಸಿಕ್ಕಲಿಲ್ಲ. ತಂಡದ ಆಟಗಾರರ ಶ್ರಮದಿಂದ ಕಪ್ ಒಲಿದು ಬಂದಿದೆ. ಹಾಗಾಗಿ 2023ರ ಟ್ರೋಫಿಯನ್ನು ಆಸೀಸ್ ಗೆಲ್ಲುವ ಮೂಲಕ 6ನೇ ಬಾರಿಗೆ ವಿಶ್ವಕಪ್ ತನ್ನದಾಗಿಸಿಕೊಂಡಿದೆ.
ಮಂಗನಿಗೆ ಗೊತ್ತಿದ್ಯಾ ಮಾಣಿಕ್ಯದ ಬೆಲೆ
ಆಸೀಸ್ ಆಟಗಾರನಿಗೆ ಆ ವಿಶ್ವಕಪ್ ಬೆಲೆ ಇನ್ನು ತಿಳಿದಿಲ್ಲ. ಹೌದು ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಪಿ ಮೇಲೆ ಕಾಲಿಟ್ಟು ಉದ್ಧಟತನ ಮೆರೆದಿದ್ದಾನೆ. ಆತ ದುರಂಹಕಾರದ ಪರಮಾವಧಿಯ ಚಿತ್ರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ಈ ದೃಶ್ಯವನ್ನು ಕಂಡು ಕೆಂಡಾಮಂಡಲರಾಗಿದ್ದಾರೆ. ಬಗೆ ಬಗೆಯ ಕಾಮೆಂಟ್ ಕೂಡ ಬರೆಯುತ್ತಿದ್ದಾರೆ.
ಇದು ಅಂಥಿಂತಾ ಟ್ರೋಫಿ ಅಲ್ಲ
ಬಹುತೇಕ ದೇಶಗಳು ವಿಶ್ವಕಪ್ಗಾಗಿಯೇ ಕಾದು ಕುಳಿತುಕೊಳ್ಳುತ್ತವೆ. ಏಕೆಂದರೆ ಒಂದು ಬಾರಿ ವಿಶ್ವಕಪ್ ಎದುರಿಸಿದರೆ ಬಹುತೇಕ ಕ್ರಿಕೆಟ್ ಆಟಗಾರರ ಒಡಲು ತುಂಬುತ್ತದೆ. ಅಷ್ಟರಮಟ್ಟಿಗೆ ವಿಶ್ವಕಪ್ ದೊಡ್ಡ ಮಟ್ಟ ಪಂದ್ಯಾವಳಿಯಾಗಿದೆ. ಆದರೆ ಸದ್ಯ ಹರಿದಾಡುತ್ತಿರುವ ಮಿಚೆಲ್ ಫೋಟೋ ಕಂಡರೆ ತಾನು ತಿಂದ ಅನ್ನವನ್ನೇ ಒದ್ದ ಕಥೆಯನ್ನು ಸಾರಿ ಹೇಳುತ್ತಿದೆ.