ಫೇಸ್ ಬುಕ್‌‌ನಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪನವರ ನಕಲಿ ಖಾತೆ; ಪ್ರಕರಣ ದಾಖಲು

ಶಿವಮೊಗ್ಗ, ನ 28: ಸಾಮಾನ್ಯವಾಗಿ ವಿವಿಧ ಸಚಿವರ ಅಥವಾ ಅಧಿಕಾರಿಗಳ ಈ ಸಾಮಾಜಿಕ ಜಾಲತಾಣಗಳ ವಿವಿಧ ನಕಲಿ ಖಾತೆಗಳನ್ನು ತೆಗೆದು ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ.ಇದೇ ರೀತಿ ಶಿಕ್ಷಣ ಸಚಿವರಾದ ಮಧುಬಂಗಾರಪ್ಪನವರಿಗೂ ಈ ನಕಲಿ ಖಾತೆಯ ಬಿಸಿ ಮುಟ್ಟಿದೆ.

ಇವರ ನಕಲಿ ಖಾತೆಯಲ್ಲಿ 58 ಸಾವಿರ ಫಾಲೋವರ್​ಗಳನ್ನು ಹೊಂದಿದ್ದು ಫೇಸ್​ಬುಕ್​ ಗ್ರೂಪ್​ ಡಿಪಿಯಲ್ಲಿ ಮಧು ಬಂಗಾರಪ್ಪ ಪೋಟೋ ಇದ್ದು ಈ ಫೇಸ್ ಬುಕ್ ಗ್ರೂಪ್‌ ಅನ್ನು ಕುಂದಾಪುರ ವಿರಾಟ ಹೆಸರಿನ ಪೇಸ್‌ಬುಕ್ ಬಳಕೆದಾರರು ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇವರ ಖಾತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪೋಸ್ಟ್ ಮಾಡಲಾಗಿದೆ. ಅಲ್ಲದೆ, ಸಾವಿರಾರು ಕೋಟಿ ಹಗರಣ ನಡೆಸಿದ್ದನ್ನು ಮುಂದಿಟ್ಟುಕೊಂಡು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಅಣಕಿಸಿ ಪೋಸ್ಟ್ ಮಾಡಲಾಗಿದೆ.

ಈ ಫೇಸ್ ಬುಕ್ ಖಾತೆಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಅಣಕಿಸುವ ಪೋಸ್ಟ್​​ನಲ್ಲಿ “ಯೇ ಹೈ ಅಚ್ಚೇ ದಿನ್, ದೇಶವನ್ನು ನುಂಗಿ ನೀರು ಕುಡಿದಿದ್ದ ಕಾಂಗ್ರೇಸ್‌. ಬಹಳ ಜನ ಅಚ್ಚೇ ದಿನ್ ಎಲ್ಲಿ ಅಂತ ಕೇಳಿದ್ದರು. ಇದು ಅಚ್ಚೇ ದಿನ್ ನೋಡಿ ಖುಷಿ ಪಡಿ ಎಂದು ಬರೆದುಕೊಂಡು ಹಾಸ್ಯ ಮಾಡಲಾಗಿದೆ. ಈ ಸಂಬಂಧ ಕಾಂಗ್ರೆಸ್ ಮುಖಂಡ ಜಿ.ಡಿ ಮಂಜುನಾಥ್ ಎಂಬವರು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಐಟಿ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Scroll to Top