ತಪ್ಪು ಯಾರೇ ಮಾಡಲಿ ಶಿಕ್ಷೆ ಕಟ್ಟಿಟ್ಟ ಬುತ್ತಿ. ಹಾಗಂತ ಪ್ರಾಣಿಗಳು ತಪ್ಪು ಮಾಡಿದರೆ ಶಿಕ್ಷೆ ಯಾರಿಗೆ?. ಇಲ್ಲೊಂದು ಪ್ರಕರಣ ಮಾತ್ರ ವಿಚಿತ್ರವಾಗಿದ್ದು ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಒಂಭತ್ತು ಮೇಕೆಗಳು ರಿಲೀಸ್ ಆಗಿವೆ. ಅಷ್ಟಕ್ಕೂ ಮೇಕೆಗಳು ಮಾಡಿದ ತಪ್ಪೇನು ಗೊತ್ತಾ?
ಮೇಕೆಗಳು ಸ್ಥಳೀಯ ಸ್ಮಶಾನದಲ್ಲಿ ಮೇಯಲು ಹೋಗಿದ್ದೇ ತಪ್ಪು. ಇದೇ ಕಾರಣದಕ್ಕೆ ಸುಮಾರು 1 ವರ್ಷದ ಹಿಂದೆ 9 ಮೇಕೆಗಳು ಜೈಲು ಸೇರಿದ್ದವು. ಆದರೆ ಶುಕ್ರವಾರದಂದು ಈ ಮೇಕೆಗಳನ್ನು ಜೈಲಿನಿಂದ ರಿಲೀಸ್ ಮಾಡಲಾಗಿದೆ.
ಅಂದಹಾಗೆಯೇ ಇದು ಬಾಂಗ್ಲಾದೇಶದ ಬಾರಿಸಾಲ್ನಲ್ಲಿ ನಡೆದ ಘಟನೆ. ಡಿಸೆಂಬರ್ 6, 2022ರಲ್ಲಿ ಮೇಕೆಗಳು ಸ್ಥಳೀಯ ಸ್ಮಶಾನದ ಒಳ ಹೊಕ್ಕಿವೆ. ಬಳಿಕ ಅಲ್ಲಿದ್ದ ಹುಲ್ಲುಗಳನ್ನು ತಿಂದಿವೆ. ಈ ಕಾರಣದಲ್ಲಿ ಬಂಧಿಸಲಾಗಿತ್ತು.
ಮೇಕೆಗಳ ಮಾಲೀಕ ಶಹರಿಯಾರ್ ಸಚಿವ್ ರಾಜೀಬ್ 9 ಮೇಕೆಗಳನ್ನು ಹಿಂತಿರುಗಿ ಪಡೆದಿದ್ದಾರೆ. ಹೊಸದಾಗಿ ಚುನಾಯಿತಗೊಂಡಿರುವ ಸಿಟಿ ಕಾರ್ಪೋರೇಷನ್ ಮೇಯರ್ ಅಬುಲ್ ಖೈರ್ ಅಬ್ದುಲ್ಲಾ ಅವರಿಗೆ ಮನವಿ ಮಾಡುವ ಮೂಲಕ ಜೈಲು ಸೇರಿದ್ದ ಮೇಕೆಗಳನ್ನು ಮರಳಿ ಪಡೆದಿದ್ದಾರೆ.
ಪ್ರಾಣಿಗಳು ಜೈಲು ಸೇರಿದ್ದು ಇದೇ ಮೊದಲಲ್ಲ
ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ಕತ್ತೆಗಳ ಹಿಂಡನ್ನು ಜೈಲಿಗೆ ಹಾಕಲಾಗಿತ್ತು. ಕಾರಣ ಉರೈ ಜೈಲಿನ ಹೊರಗೆ 5 ಲಕ್ಷ ಮೌಲ್ಯದ ಸಸ್ಯಗಳನ್ನು ತಿಂದು ನಾಶ ಪಡಿಸಿದ್ದಕ್ಕಾಗಿ ಬಂಧಿಸಲಾಯಿತು. 4 ದಿನಗಳ ಬಳಿಕ ಕತ್ತೆಗಳನ್ನು ರಿಲೀಸ್ ಮಾಡಲಾಗಿತ್ತು.