ಗುಲಾಬ್ ಜಾಮೂನ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದೆಷ್ಟೋ ಜನ ಗುಲಾಬ್ ಜಾಮೂನ್ಗಾಗಿ ಜೀವನೇ ಬಿಡುತ್ತಾರೆ. ಆದರೇ ತಿನ್ನುವ ಗುಲಾಬ್ ಜಾಮೂನ್ನಲ್ಲಿ ಹುಳ ಬಂದರೆ ಹೇಗಿರುತ್ತೆ.!? ಚೆನ್ನೈ ಅಂಗಡಿಯಿಂದ ಖರೀದಿಸಿದ ಗುಲಾಬ್ ಜಾಮೂನ್ನಲ್ಲಿ ಹುಳು ಸುಳಿಯುತ್ತಿರುವುದನ್ನು ವ್ಯಕ್ತಿಯೋರ್ವ ವೀಡಿಯೋ ಮಾಡಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಆಹಾರ ಬ್ಲಾಗರ್ ಒಬ್ಬರು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಸಣ್ಣ ಬಿಳಿ ಹುಳುವೊಂದು ಗುಲಾಬ್ ಜಾಮೂನ್ ಮೇಲೆ ಸುತ್ತುತ್ತಿರುವುದನ್ನು ಕಾಣಬಹುದು. ಈ ವೀಡಿಯೋ ವೈರಲ್ ಆಗಿದ್ದು, ಇಲ್ಲಿಯವರೆಗೆ ಸುಮಾರು 5 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.
ಗುಲಾಬ್ ಜಾಮೂನ್ ಬಾಕ್ಸ್ ನಲ್ಲಿ ಚೆನ್ನೈನಲ್ಲಿರುವ ಔಟ್ಲೆಟ್ ಅನ್ನು ಉಲ್ಲೇಖಿಸಿದ್ದಾರೆ. ವೈರಲ್ ಆದ ವೀಡಿಯೋ ನೋಡಿದ ಅದೇ ಅಂಗಡಿಯ ವ್ಯಕ್ತಿಯೊರ್ವ ಈ ಘಟನೆಯ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.