ಬೆಂಗಳೂರು, ನ.30: ಬಾಯ್ಫ್ರೆಂಡ್ ಫೋನ್ ಅನ್ನು ಗರ್ಲ್ ಫ್ರೆಂಡ್ ಕೈಗೆ ಕೊಡೋದು. ಗರ್ಲ್ ಫ್ರೆಂಡ್ ಫೋನ್ ಅನ್ನು ಬಾಯ್ಫ್ರೆಂಡ್ಗೆ ತೋರಿಸೋದು ಬಹಳ ಕಷ್ಟ. ಎಷ್ಟೋ ಹುಡುಗ-ಹುಡುಗಿಯರು ಫೋನ್ ಲಾಕ್ ಮಾಡದೇ ಯಾರಿಗೂ ಕೊಡೋದಿಲ್ಲ. ಎಷ್ಟೇ ಕ್ಲೋಸ್ ಇದ್ರೂ ಫೋನ್ ಗ್ಯಾಲರಿ ತೋರಿಸೋಕೆ ಹಿಂದೆ ಮುಂದೆ ಯೋಚನೆ ಮಾಡ್ತಾರೆ. ಯಾಕಂದ್ರೆ ಕೆಲವೊಂದು ಮುಚ್ಚಿಟ್ಟಿರೋ ರಹಸ್ಯ ಗೊತ್ತಾದ್ರೆ ಮುಂದೆ ಆಗೋದೇ ಬೇರೆ.
ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿ ತನ್ನ ಬಾಯ್ ಫ್ರೆಂಡ್ ಮೊಬೈಲ್ ಗ್ಯಾಲರಿ ನೋಡಿ ಕಂಪ್ಲೇಂಟ್ ಕೊಟ್ಟಿರೋ ಘಟನೆ ಬೆಳಕಿಗೆ ಬಂದಿದೆ.
ಬಾಯ್ ಫ್ರೆಂಡ್ ಮೊಬೈಲ್ನಲ್ಲಿದ್ದ 13 ಸಾವಿರ ನಗ್ನ, ಅಶ್ಲೀಲ ಫೋಟೋಗಳನ್ನ ನೋಡಿದ ಆ ಯುವತಿ ಬಿಗ್ ಶಾಕ್ಗೆ ಒಳಗಾಗಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ ಯುವತಿಗೆ ಅದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಆದಿತ್ಯ ಸಂತೋಷ್ ಎಂಬಾತನ ಜೊತೆ ಸಂಬಂಧ ಇತ್ತು. ಇಬ್ಬರು ಏಕಾಂತದಲ್ಲಿದ್ದಾಗ ಆದಿತ್ಯ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದ. ಅದನ್ನ ಡಿಲೀಟ್ ಮಾಡಲು ಆತನ ಮೊಬೈಲ್ ಕಸಿದುಕೊಂಡ ಪ್ರಿಯತಮೆಗೆ ಅಸಲಿ ವಿಷಯ ಗೊತ್ತಾಗಿದೆ.
ಬಾಯ್ಫ್ರೆಂಡ್ ಮೊಬೈಲ್ನಲ್ಲಿ ತನ್ನ ನಗ್ನ ಫೋಟೋ ಮಾತ್ರ ಇರಲಿಲ್ಲ. ಅದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಹಲವು ಯುವತಿಯರ ಪ್ರೈವೇಟ್ ಫೋಟೋಗಳು ಪತ್ತೆಯಾಗಿದೆ. ಬರೋಬ್ಬರಿ 13 ಸಾವಿರ ನಗ್ನ ಫೋಟೋಗಳನ್ನ ನೋಡಿ ಯುವತಿ ಶಾಕ್ ಆಗಿದ್ದಾರೆ. ಆತನ ಮೊಬೈಲ್ನಲ್ಲಿ ಆಫೀಸ್ನ ಎಲ್ಲರ ನೂಡ್ ಪೋಟೋಸ್ ನೋಡಿ ಆ ಪ್ರಿಯತಮೆ ಕಂಪ್ಲೇಂಟ್ ಕೂಡ ಕೊಟ್ಟಿದ್ದಾರೆ.
ಮಾರ್ಫಿಂಗ್ ಮಾಡುತ್ತಿದ್ದ ಬಾಯ್ಫ್ರೆಂಡ್!
ಬಾಯ್ಫ್ರೆಂಡ್ ಆದಿತ್ಯ ಸಂತೋಷ್ ತನ್ನ ಸಹೋದ್ಯೋಗಿ ಹುಡುಗಿಯರ ಫೋಟೋಗಳನ್ನ ಮಾರ್ಫಿಂಗ್ ಮಾಡುತ್ತಿದ್ದ. ಇದನ್ನೆಲ್ಲಾ ನೋಡಿದ ಆ ಯುವತಿ ಈ ವಿಚಾರವನ್ನ ತನ್ನ ಕಂಪನಿಯ ಮುಖ್ಯಸ್ಥರಿಗೆ ತಿಳಿಸಿದ್ದಾಳೆ. ತಕ್ಷಣ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಿ ಆದಿತ್ಯ ಸಂತೋಷ್ ಆ್ಯಪ್ವೊಂದನ್ನ ಬಳಸಿ ಈ ರೀತಿ ಮಾಡಿರೋದು ಪತ್ತೆಯಾಗಿದೆ. ಈ ಫೋಟೋಗಳನ್ನ ನೋಡಿ ಆತ ಖುಷಿ ಪಡುತ್ತಿದ್ದ ಅನ್ನೋದು ಪೊಲೀಸರ ವಿಚಾರಣೆಯಲ್ಲಿ ಗೊತ್ತಾಗಿದೆ.
ಆರೋಪಿಯು 13 ಸಾವಿರ ಫೋಟೋಗಳನ್ನು ಇಟ್ಟುಕೊಂಡಿದ್ದು ಯಾಕೆ ಎಂಬುದನ್ನು ಕಂಡುಹಿಡಿಯಲು ನಮಗೆ ಸ್ವಲ್ಪ ಸಮಯ ಬೇಕು. ಅವುಗಳಲ್ಲಿ ಕೆಲವು ಮಾರ್ಫ್ ಆಗಿವೆ ಮತ್ತು ಕೆಲವು ನೈಜವಾಗಿವೆ. ಅವರನ್ನು ಬಳಸಿಕೊಂಡು ಯಾವುದೇ ಮಹಿಳೆಗೆ ಬ್ಲ್ಯಾಕ್ಮೇಲ್ ಮಾಡಿದ್ದಾರಾ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಅವರ ಮೊಬೈಲ್ ಚಾಟಿಂಗ್ ಇತಿಹಾಸ ಮತ್ತು ಫೋನ್ ಕರೆಗಳು ಸಹ ಪರಿಶೀಲನೆಯಲ್ಲಿವೆ ಎಂದು ತನಿಖೆ ನಡೆಸುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.
ಈ ಫೋಟೋಗಳು ಸದ್ಯ ಆರೋಪಿಯ ಮೊಬೈಲ್ನಲ್ಲಿ ಪತ್ತೆಯಾಗಿದೆ. ಅವುಗಳು ಲೀಕ್ ಆಗಿದ್ದರೆ ಅತಿದೊಡ್ಡ ಸಮಸ್ಯೆಯಾಗುತ್ತಿತ್ತು. ಆ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.