ಬಿಲ್‌ ಕಟ್ಟದ ಸ್ಟೇಡಿಯಂ : ಭಾರತ -ಆಸೀಸ್ ಟಿ20 ಪಂದ್ಯ ನಡೆಯುವ ಕ್ರೀಡಾಂಗಣದಲ್ಲಿಲ್ಲ ವಿದ್ಯುತ್

ರಾಯ್‌ಪುರ : ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಟಿ20 ಪಂದ್ಯ ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯ ಗೆದ್ದರೆ ಭಾರತ ಸರಣಿ ಗೆಲ್ಲಲಿದೆ. ಆದರೆ, ಈ ನಿರ್ಣಾಯಕ ಪಂದ್ಯಕ್ಕೆ ಕೆಲವೇ ಗಂಟೆಗಳಿರುವಾಗ, ಕ್ರೀಡಾಂಗಣದ ಕೆಲವು ಭಾಗಗಳಲ್ಲಿ ವಿದ್ಯುತ್ ಇಲ್ಲ ಎಂದು ತಿಳಿದುಬಂದಿದೆ.


ಪಂದ್ಯಕ್ಕೂ ಮುನ್ನವೇ ಇಡೀ ಸ್ಟೇಡಿಯಂನಲ್ಲಿ ವಿದ್ಯುತ್ ಪೂರೈಕೆ ಕಡಿತಗೊಂಡಿದ್ದು, ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿರುವುದು ಇದಕ್ಕೆ ಕಾರಣವಾಗಿದೆ. ಕ್ರೀಡಾಂಗಣಕ್ಕೆ 3.16 ಕೋಟಿ ರೂ. ಕರೆಂಟ್‌ ಬಿಲ್ ಬಾಕಿ ಇದ್ದು, 2009ರಿಂದಲೂ ವಿದ್ಯುತ್ ಬಿಲ್ ಕಟ್ಟಿಲ್ಲ ಎಂದು ತಿಳಿದುಬಂದಿದೆ.

5 ವರ್ಷಗಳ ಹಿಂದೆಯೇ ಸ್ಟೇಡಿಯಂನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಸಂಸ್ಥೆಯ ಕೋರಿಕೆಯ ಮೇರೆಗೆ ತಾತ್ಕಾಲಿಕ ಸಂಪರ್ಕವನ್ನು ಸ್ಥಾಪಿಸಲಾಗಿದ್ದರೂ, ಅದು ಪ್ರೇಕ್ಷಕರ ಗ್ಯಾಲರಿ ಮತ್ತು ಬಾಕ್ಸ್‌ಗಳನ್ನು ಮಾತ್ರ ಒಳಗೊಂಡಿದೆ.

ಕ್ರೀಡಾಂಗಣದ ನಿರ್ಮಾಣದ ನಂತರ, ಅದರ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆಗೆ (ಪಿಡಬ್ಲ್ಯೂಡಿ) ಹಸ್ತಾಂತರಿಸಲಾಯಿತು, ಉಳಿದ ವೆಚ್ಚವನ್ನು ಕ್ರೀಡಾ ಇಲಾಖೆ ಭರಿಸಬೇಕಾಗಿತ್ತು. ಎರಡು ಇಲಾಖೆಗಳು ವಿದ್ಯುತ್ ಬಿಲ್ ಪಾವತಿಯಾಗದೆ ಪರಸ್ಪರ ಆರೋಪದಲ್ಲಿ ತೊಡಗಿಕೊಂಡಿದೆ.

Scroll to Top