ಪ್ರೀತಿ ನಿರಾಕರಿಸಿ ಬೇರೊಬ್ಬನ ಜೊತೆ ಮದುವೆಗೆ ಸಿದ್ಧತೆ.. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ

ಯುವಕನೋರ್ವ ಪ್ರೀತಿ ನಿರಾಕರಿಸಿದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಘಟನೆ ಕೆಂಗೇರಿಯ ಕೊಡಿಗೆ ಪಾಳ್ಯದಲ್ಲಿ ನಡೆದಿದೆ.

ಆನೇಕಲ್ ತಾಲೂಕಿನ ಜಿಗಣಿಯ ಕಲ್ಲುಬಾಳು ಗ್ರಾಮದ ರಾಕೇಶ್ ಮೃತ ಯುವಕ.

ರಾಕೇಶ್ ಐದಾರು ವರ್ಷದಿಂದ‌ ಯುವತಿಯೋರ್ವಳನ್ನು ಪ್ರೀತಿ ಮಾಡುತ್ತಿದ್ದನು.ಇತ್ತೀಚೆಗೆ ಬೇರೆ ಯುವಕನ ಜೊತೆಗೆ ಆಕೆ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದಾಳೆ. ಮಾತ್ರವಲ್ಲದೆ, ಯುವತಿ ರಾಕೇಶನನ್ನು ಅವಾಯ್ಡ್ ಮಾಡಿದ್ದಳು. ಹೀಗಾಗಿ ನಿನ್ನೆ ರಾಕೇಶ್ ಆಕೆಯ ಮನೆಯ ಬಳಿ ಹೋಗಿ ಪ್ರಶ್ನೆ ಮಾಡಿದ್ದನು. ಈ ಸಂದರ್ಭದಲ್ಲಿ ರಾಕೇಶ್ ಹಾಗೂ ಯುವತಿ ಜೊತೆ ಗಲಾಟೆ ಆಗಿತ್ತು. ಇದರಿಂದ ಮನನೊಂದು ರಾಕೇಶ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ರಾಕೇಶ್ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಈ ವಿಚಾರ ತಿಳಿದು ಕೂಡಲೇ ರಾಕೇಶ್ ನನ್ನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ರಾಕೇಶ್ ದೇಹದ ಬಹುತೇಕ ಭಾಗ ಸುಟ್ಟು ಹೋಗಿತ್ತು. ತೀವ್ರ ನೋವಿನಿಂದ ಬಳಲುತ್ತಿದ್ದ ರಾಕೇಶ್ ನಿನ್ನೆ ರಾತ್ರಿ ಮೃತಪಟ್ಟಿದ್ದಾನೆ.

ರಾಕೇಶ್ ಕುಟುಂಬಸ್ಥರಿಂದ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

You cannot copy content from Baravanige News

Scroll to Top