‘ಮೋದಿ ಜೀ ಎಂದು ಕರೆದು ಸಾರ್ವಜನಿಕರಿಂದ ದೂರ ಮಾಡಬೇಡಿ’- ಸಂಸದರಿಗೆ ಮನವಿ

ನವದೆಹಲಿ, ಡಿ 07: ಮೋದಿ ಜೀ ಎಂದು ಕರೆಯುವ ಮೂಲಕ ಸಾರ್ವಜನಿಕರಿಂದ ನನ್ನನ್ನು ದೂರ ಮಾಡಬೇಡಿ ಎಂದು ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ.

ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಈ ಕುರಿತು ಪ್ರಸ್ತಾಪ ಮಾಡಿದ ಪ್ರಧಾನಿಯವರು ದಯವಿಟ್ಟು ಮೋದಿ ಜೀ ಎಂದು ಕರೆಯಬೇಡಿ ಅಂತ ಸಂಸದರನ್ನು ಕೇಳಿಕೊಂಡರು. ಇದರಿಂದ ದೇಶದ ಜನ ಹಾಗೂ ನನ್ನ ನಡುವೆ ಅಂತರ ಇರುವಂತೆ ನನಗೆ ಕಾಡುತ್ತದೆ. ಹೀಗಾಗಿ ನನ್ನನ್ನು ಮೋದಿ ಎಂದಷ್ಟೇ ಕರೆಯಿರಿ ಎಂದು ಹೇಳಿದರು

ಪ್ರಧಾನಿ ಮೋದಿ ಅವರು ಪಕ್ಷದ ಸಾಮಾನ್ಯ ಕಾರ್ಯಕರ್ತ ಮತ್ತು ಜನಸಾಮಾನ್ಯರಂತೆ ಇರಲು ಬಯಸುತ್ತಾರೆ. ಹೀಗಾಗಿ ತಮ್ಮ ಕುಟುಂಬದ ಭಾಗವೆಂದು ಪರಿಗಣಿಸುವಂತೆ ಹೇಳುತ್ತಾರೆ. ಇತರೆ ಸಂಸದರಂತೆ ಮೋದಿಯೂ ಕೂಡ ಒಬ್ಬ ಸಂಸದರು ಎಂಬಂತೆ ಭಾವಿಸಬೇಕು ಎಂದು ಅವರು ನಂಬುತ್ತಾರೆ ಎಂದು ಸಭೆಯಲ್ಲಿದ್ದ ಸಂಸದರೊಬ್ಬರು ಮಾಧ್ಯಮಕ್ಕೆ ತಿಳಿಸಿದರು.

ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‍ಗಢ ರಾಜ್ಯಗಳ ವಿಜಯದ ಕುರಿತು ಮಾತನಾಡಿದ ಮೋದಿ, ಇದು ಯಾರ ವೈಯಕ್ತಿಕ ವಿಜಯವಲ್ಲ, ಸಾಮೂಹಿಕ ಗೆಲುವುವಾಗಿದೆ. ಪಕ್ಷದ ಎಲ್ಲಾ ಕಾರ್ಯಕರ್ತರ ಪರಿಶ್ರಮದ ಫಲವೇ ಬಿಜೆಪಿ ಗೆಲುವಿಗೆ ಕಾರಣ ಎಂದು ಹೇಳುವ ಮೂಲಕ ಪ್ರತಿಯೊಬ್ಬರ ಕೆಲಸವನ್ನು ಶ್ಲಾಘಿಸಿದರು.

You cannot copy content from Baravanige News

Scroll to Top