ನವದೆಹಲಿ, ಡಿ 12: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) 2023-24 ನೇ ಸಾಲಿನ 10ನೇ, 12ನೇ ತರಗತಿಯ ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸಿದೆ. ಇದರ ಅನುಸಾರ ಫೆಬ್ರವರಿ 15 ರಿಂದ ಪರೀಕ್ಷೆಗಳು ಪ್ರಾರಂಭವಾಗುತ್ತದೆ.
10 ನೇ ತರಗತಿಯ ಪರೀಕ್ಷೆಗಳು ಫೆಬ್ರವರಿ 21ರಿಂದ ಪ್ರಾರಂಭವಾಗಿ ಮಾರ್ಚ್ 11 ರ ವರೆಗೆ ಇರಲಿದೆ. ಹಾಗೇ 12 ನೇ ತರಗತಿಯ ಪರೀಕ್ಷೆಗಳು ಫೆಬ್ರವರಿ 15 ಏಪ್ರಿಲ್ 1ರ ವರೆಗೆ ವಿವಿಧ ಪರೀಕ್ಷೆಗಳು ನಡೆಯಲಿವೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
10 ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಈ ಕೆಳಗಿನಂತಿವೆ:
- ಫೆಬ್ರವರಿ 21 – ಹಿಂದಿ
- ಫೆಬ್ರವರಿ 26 – ಇಂಗ್ಲೀಷ್
- ಮಾರ್ಚ್ 2 – ವಿಜ್ಞಾನ
- ಮಾರ್ಚ್ 7 – ಸಮಾಜ ವಿಜ್ಞಾನ
- ಮಾರ್ಚ್ 11 – ಗಣಿತ ಪರೀಕ್ಷೆ ನಡೆಯಲಿದೆ.
- ಹೆಚ್ಚಿನ ಮಾಹಿತಿಯನ್ನು
https://adda247jobs-wp-assets-adda247.s3.ap-south-1.amazonaws.com/jobs/wp-content/uploads/sites/2/2023/12/12174254/105933291.pdf ಅಲ್ಲಿ ಪಡೆಯಬಹುದಾಗಿದೆ.
12 ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಈ ಕೆಳಗಿನಂತಿವೆ:
- ಫೆಬ್ರವರಿ 19 – ಹಿಂದಿ
- ಫೆಬ್ರವರಿ 22 – ಇಂಗ್ಲೀಷ್
- ಫೆಬ್ರವರಿ 27 – ರಸಾಯನಶಾಸ್ತ್ರ
- ಫೆಬ್ರವರಿ 29 – ಭೂಗೋಳಶಾಸ್ತ್ರ
- ಮಾರ್ಚ್ 4 – ಭೌತಶಾಸ್ತ್ರ
- ಮಾರ್ಚ್ 9 – ಗಣಿತ
- ಮಾರ್ಚ್ 18 – ಅರ್ಥಶಾಸ್ತ್ರ
- ಮಾರ್ಚ್ 19 – ಜೀವಶಾಸ್ತ್ರ
- ಮಾರ್ಚ್ 22 – ರಾಜಕೀಯ ವಿಜ್ಞಾನ
- ಮಾರ್ಚ್ 23 – ಅಕೌಂಟೆನ್ಸಿ
- ಮಾರ್ಚ್ 27 – ವ್ಯಾಪಾರ ಅಧ್ಯಯನ
- ಮಾರ್ಚ್ 28 – ಇತಿಹಾಸ
- ಮಾರ್ಚ್ 30 – ಸಂಸ್ಕೃತ
- ಏಪ್ರಿಲ್ 1 – ಸಮಾಜಶಾಸ್ತ್ರ
- ಏಪ್ರಿಲ್ 2 – ಕಂಪ್ಯೂಟರ್ ಸೈನ್ಸ್ ಗಣಿತ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಯನ್ನು
https://adda247jobs-wp-assets-adda247.s3.ap-south-1.amazonaws.com/jobs/wp-content/uploads/sites/2/2023/12/12174239/105933262.pdf ಅಲ್ಲಿ ಪಡೆಯಬಹುದಾಗಿದೆ.