ಸುಳ್ಯ, ಡಿ.13: ಸುಳ್ಯ ತಾಲೂಕಿನ ಕಳಂಜ ಗ್ರಾಮದ ತಂಟೆಪ್ಪಾಡಿಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ ಎನ್ನಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕಲ್ಲೊಂದು ಗಾಳಿಯಲ್ಲಿ ತೇಲಿದ ಘಟನೆ ನಡೆದಿದ್ದು, ಕಾಲೇಜು ವಿದ್ಯಾರ್ಥಿನಿಯೋರ್ವರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ತಂಟೆಪ್ಪಾಡಿ ಪುಟ್ಟಣ್ಣ ಗೌಡ ಅವರ ಪುತ್ರಿ ಧನುಶ್ರೀ ಕೆಲವು ದಿನಗಳ ಹಿಂದೆ ಬೆಳಗ್ಗೆ 7 ಗಂಟೆ ಸುಮಾರಿಗೆ ಪುತ್ತೂರಿಗೆ ಕಾಲೇಜಿಗೆಂದು ತೆರಳುತ್ತಿರುವಾಗ ರಸ್ತೆಯಲ್ಲಿ ಜಲ್ಲಿ ಕಲ್ಲೊಂದು ತೇಲಾಡುವ ದೃಶ್ಯ ಕಂಡು ಬಂದಿದೆ.
ಕೂಡಲೇ ಆಕೆ ಈ ದೃಶ್ಯವನ್ನು ತನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ” ಕೆಲವು ಸೆಕುಂಡುಗಳಷ್ಟೇ ಹಾರಾಡಿದೆ ಕಲ್ಲು ಮತ್ತೆ ರಸ್ತೆಗೆ ಬಿತ್ತು ಎನ್ನಲಾಗಿದೆ.ಈ ವೀಡಿಯೋ ಎಲ್ಲೆಡೆ ಸಾಮಾಕಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇದರ ಸಾಧ್ಯಾಸಾಧ್ಯತೆಯ ಬಗ್ಗೆ ಚರ್ಚೆ ಶುರುವಾಗಿದೆ.