ವೃದ್ಧೆಗೆ 2ನೇ ವಿವಾಹವಾಗುವ ಬಯಕೆ.. ಜಾಹೀರಾತು ಕಂಡು ಪರಿಚಯವಾದ ವೃದ್ಧನಿಂದ ಮಹಾಮೋಸ

ಹಾವೇರಿ: ವೃದ್ಧೆಯೊಬ್ಬರು ವಧು-ವರರು ಬೇಕಾಗಿದ್ದಾರೆ ಎಂಬ ಜಾಹೀರಾತು ನೋಡಿ ಮೋಸ ಹೋದ ಘಟನೆ ಹಾವೇರಿ ನಗರದಲ್ಲಿ ನಡೆದಿದೆ.

8 ತಿಂಗಳ ಹಿಂದೆ ನಡೆದಿದ್ದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

55 ವರ್ಷದ ನಿರ್ಮಲಾ ಮಾಗೋಡಿ ಎಂಬ ವೃದ್ಧೆಗೆ 60 ವರ್ಷದ ಸಂತೋಷ ಎಮ್ ಎಂಬ ವೃದ್ಧನ ಪರಿಚಯವಾಗಿತ್ತು. 20 ದಿನಗಳ ಪರಿಚಯ ಸ್ನೇಹವಾಯ್ತು. ಕೊನೆಗೆ ಸ್ನೇಹ ಪ್ರೀತಿಯಾಯ್ತು. ಬಳಿಕ ಪ್ರೇಮ ಮದುವೆಯ ಮಾತುಕತೆಯ ತನಕ ಹೋಗಿತ್ತು. ಆದರೆ ಐನಾತಿ ಅಜ್ಜ ನಂಬಿದ್ದ ಅಜ್ಜಿಗೆ ಮೋಸ ಮಾಡಿದ್ದಾನೆ.

ನಿರ್ಮಲಾ ಮಾಗೋಡಿಗೆ ಎರಡನೇ ಮದುವೆಯಾಗಬೇಕೆಂಬ ಆಸೆಯಿತ್ತು. ಹೀಗಾಗಿ ಆಕೆಯ ಕುಟುಂಬ ಮಾತುಕತೆ ಕೂಡ ನಡೆಸಿದ್ದರು. ಕೊನೆಗೆ ವೃದ್ಧೆ ಸಂತೋಷಗೆ ಪೋನ್ ಕರೆ ಮಾಡುತ್ತಾಳೆ. ಆದರೆ ಅಜ್ಜ ಇದು ಸರಿಯಾದ ಸಮಯವೆಂದು ಹಾವೇರಿಯ ಹುಕ್ಕೇರಿ ಮಠಕ್ಕೆ ವೃದ್ಧೆಯನ್ನು ಕರೆಯಿಸಿಕೊಳ್ಳುತ್ತಾನೆ. ನಂತರ ಆಕೆಗೆ ಜ್ಯೂಸ್ ನಲ್ಲಿ ಮತ್ತು ಬರಿಸುವ ಮಾತ್ರೆ ಹಾಕಿ ಪ್ರಜ್ಞೆ ತಪ್ಪಿಸಿದ್ದಾನೆ. ಬಳಿಕ 7 ತೊಲೆ ಬಂಗಾರ, 50 ಸಾವಿರ ಹಣ ದೋಚಿ ಪರಾರಿಯಾಗಿದ್ದಾನೆ.

ಇದೀಗ ಮೋಸ ಹೋದ ವೃದ್ಧೆ ನಿರ್ಮಲಾ ಹಾಗೂ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕ್ರೀಮಿನಲ್ ಸಂತೋಷ ಎಂಬ ವೃದ್ಧನ ವಿರುದ್ದ ದೂರು ನೀಡಿದ್ದಾರೆ. ಸದ್ಯ ಆರೋಪಿ ಪತ್ತೆಗಾಗಿ ಪೋಲಿಸರಿಂದ ಹುಡುಕಾಟ ನಡೆಯುತ್ತಿದೆ. ಹಾವೇರಿ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

You cannot copy content from Baravanige News

Scroll to Top