ಬೆಚ್ಚ ಬೆಚ್ಚ ನ್ಯೂಸ್
15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿ‌ನ್‌ ಸನಿಲ್‌ ಕುರ್ಕಾಲು!
ಪುತ್ತೂರು : ಮುಸ್ಲಿಂ ಯುವತಿಗೆ ಚೂರಿ ಇರಿದ ಹಿಂದೂ ಯುವಕ : ಆಸ್ಪತ್ರೆಗೆ ದಾಖಲು!
ಬಟ್ಟೆ ಕೊಳ್ಳುವ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ : ಕೊಲೆಯಲ್ಲಿ ಗಲಾಟೆ ಅಂತ್ಯ
ಶಿರ್ವ: ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಂಸ್ಥಾಪಕ ಗೇಬ್ರಿಯಲ್ ನಜರೆತ್ ನಿಧನ
ಅಧಿಕ ಲಾಭಾಂಶ ಆಮಿಷ ; ಹಿರಿಯ ನಾಗರಿಕರಿಗೆ ಲಕ್ಷಾಂತರ ರೂ.ವಂಚನೆ
ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಖಂಡಿಸಿ ಮೆರವಣಿಗೆ, ಮುಷ್ಕರ
ಸೂಡ ಶ್ರೀ ಸುಬ್ರಹ್ಮಣ್ಯ ಕುಣಿತ ಭಜನಾ ಮಂಡಳಿ ಉದ್ಘಾಟನಾ ಸಮಾರಂಭ
ತಂದೆಯನ್ನು ಆಸ್ಪತ್ರೆಗೆ ಸೇರಿಸಿ ಕಾರಿನಲ್ಲಿ ಎಸಿ ಹಾಕಿ ಮಲಗಿದ್ದ ಮಗ ಸಾವು
ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರಿಂದ ಅನುಮತಿ
ಮುಳುವಾದ ಸೌಂದರ್ಯ… ಪತ್ನಿ ನೋಡಲು ಸುಂದರವಾಗಿದ್ದಾಳೆಂದು ಆಕೆಯ ಕಥೆಯನ್ನೇ ಮುಗಿಸಿದ ಪತಿರಾಯ
Next
Prev

ಮಂಗಳೂರು – ಮಡ್ಗಾಂವ್‌ ವಂದೇ ಭಾರತ್‌ ರೈಲು ಪರೀಕ್ಷಾರ್ಥ ಸಂಚಾರಕ್ಕೆ ಚಾಲನೆ

ಮಂಗಳೂರು : ಕರಾವಳಿ ಜನರ ನಿರೀಕ್ಷೆಯ ಮಂಗಳೂರು – ಮಡ್ಗಾಂವ್‌ ವಂದೇ ಭಾರತ್‌ ರೈಲಿಗೆ ಡಿ.30 ರಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್‌ ಮೂಲಕ ಚಾಲನೆ ನೀಡುವುದು ಬಹುತೇಕ ಖಚಿತವಾಗಿದೆ.

ಈ ಹಿನ್ನೆಲೆಯಲ್ಲಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಪ್ರಯೋಗಿಕವಾಗಿ ಒಂದೇ ಭಾರತ್ ರೈಲು ಓಡಾಟ ಆರಂಭಿಸಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ್ ಕಾಮತ್ ಸೇರಿದಂತೆ ಇತರ ನಾಯಕರು ವಂದೇ ಭಾರತ್ ರೈಲನ್ನು ವೀಕ್ಷಣೆ ಮಾಡಿದರು.

ಡಿ.30 ರಂದು ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ನಿರ್ಮಾಣವಾದ 4 ಮತ್ತು 5ನೇ ಫ್ಲ್ಯಾಟ್‌ ಫಾರಂನ ಉದ್ಘಾಟನೆ ಕೂಡ ನಡೆಯಲಿದೆ.

ಮಂಗಳೂರು – ಗೋವಾ ನಡುವಿನ ವಂದೇ ಭಾರತ್‌ ರೈಲಿನ ಸದ್ಯದ ವೇಳಾಪಟ್ಟಿ ಪ್ರಕಾರ, ಮಂಗಳವಾರ ಹೊರತುಪಡಿಸಿ ವಾರದ 6 ದಿನ ಸಂಚಾರ ನಡೆಸಲಿದೆ. ಪ್ರತಿದಿನ ಬೆಳಗ್ಗೆ 8.30ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಮಧ್ಯಾಹ್ನ 1.05ಕ್ಕೆ ಮಡ್ಗಾಂವ್‌ ತಲುಪಲಿದೆ. ಮಡ್ಗಾಂವ್‌ನಿಂದ ಸಂಜೆ 6.10ಕ್ಕೆ ಹೊರಟು ರಾತ್ರಿ 10.45ಕ್ಕೆ ಮಂಗಳೂರು ಸೆಂಟ್ರಲ್‌ ತಲುಪಲಿದೆ.
ವಂದೇ ಭಾರತ್‌ ರೈಲಿಗೆ ಉಡುಪಿ ಮತ್ತು ಕಾರವಾರಗಳಲ್ಲಿ ಮಾತ್ರ ನಿಲುಗಡೆ ಕಲ್ಪಿಸಲಾಗಿದೆ. ಈ ರೈಲಿನ ನಿರ್ವಹಣೆ ಮಂಗಳೂರು ಸೆಂಟ್ರಲ್‌ ನಿಲ್ದಾಣದಲ್ಲಿ ನಡೆಯಲಿದೆ.

Related Posts

Scroll to Top