ಲಯನ್ಸ್ ಕ್ಲಬ್ ಬಂಟಕಲ್ಲು ಬಿ ಸಿ ರೋಡ್ ವತಿಯಿಂದ ಸಕ್ಕರೆ ಖಾಯಿಲೆಯ ವಿಶೇಷ ಅರಿವು ಕಾರ್ಯಕ್ರಮ

Dist.317C, Region3, Zone3 ನ ಲಯನ್ಸ್ ಕ್ಲಬ್ ಬಂಟಕಲ್ಲು ಬಿ ಸಿ ರೋಡ್ ನ ಸದಸ್ಯರು ಇಂದು ವಿಶೇಷ ರೀತಿಯಲ್ಲಿ ಡಯಾಬೆಟಿಕ್ (ಸಕ್ಕರೆ ಖಾಯಿಲೆ) ಅರಿವು ಮೂಡಿಸುವಿಕೆಯ ಕಾರ್ಯಕ್ರಮವನ್ನು ಬಂಟಕಲ್ಲು ಪೇಟೆಯಲ್ಲಿ ನೆರವೇರಿಸಿದರು.

ರಸ್ತೆಯಲ್ಲಿ ಹಾದುಹೋಗುವ ಎಲ್ಲ ನಾಗರಿಕರಿಗೆ ಹಾಗೂ ಬಸ್ಸು ಗಳನ್ನು ನಿಲ್ಲಿಸಿ, ಬಸ್ಸಿನ ಒಳಗೆ ಇರುವ ಎಲ್ಲಾ ಪ್ರಯಾಣಿಕರಿಗೆ ಈ ಖಾಯಿಲೆಯ ಬಗ್ಗೆ ಅರಿವು ಮೂಡಿಸಲಾಯಿತು. ಸಂಸ್ಥೆಯ ಮಾಜಿ ಆದ್ಯಕ್ಷರಾದ ಲ. ವಿಜಯ್ ಧೀರಜ್ ಅವರು ಡಯಾಬಿಟಿಸ್ , ಸಕ್ಕರೆ ಕಾಯಿಲೆ, ಮದುಮೇಹ ಎಂಬ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಈ ಕಾಯಿಲೆ ಈಗ ಸಾಮಾನ್ಯವಾದ ರೋಗ ಲಕ್ಷಣವಾಗಿಬಿಟ್ಟಿದೆ. ಇದು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಹೆಚ್ಚಿಸಿ ಅನೇಕ ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಹಾಗೂ ಇದನ್ನು ಯಾವ ಯಾವ ರೀತಿಯಲ್ಲಿ ನಿಯಂತ್ರಣಕ್ಕೆ ತರಬಹುದು ಎಂದು ಪ್ರಯಾಣಿಕರಿಗೆ ಅರಿವು ಮೂಡಿಸಿದರು.

ಈ ಕಾರ್ಯಕ್ರಮದಲ್ಲಿ ಬಂಟಕಲ್ಲು ಬಿ ಸಿ ರೋಡ್ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲ.ಜೋಸಿಲ್ ನೊರೊಹ್ನ ಇವರು ಎಲ್ಲಾ ಪ್ರಯಾಣಿಕರಿಗೆ ಶುಭಹಾರೈಸಿದರು ಹಾಗೂ ಕೋಶಾಧಿಕಾರಿ ಲ. ಸದಾನಂದ ಪೂಜಾರಿ ಇವರು ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಬಂಟಕಲ್ಲು ಲಯನ್ಸ್ ಕ್ಲಬ್ ನ ಎಲ್ಲಾ ಸದಸ್ಯರ ಜೊತೆ, ಪಾಂಬೂರಿನ ಯುವಕರೂ ಕೂಡ ಈ ಕಾರ್ಯಕ್ರಮಕ್ಕೆ ಕೈ ಜೋಡಿಸಿದರು. ಸ್ಥಳೀಯ ನಾಗರಿಕರು, ರಿಕ್ಷಾ ಚಾಲಕರು, ಎಲ್ಲಾ ಅಂಗಡಿ ಮಾಲೀಕರು, ಹಾಗೂ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರು ಈ ಕಾರ್ಯಕ್ರಮದ ಅರಿವನ್ನು ಪಡೆದುಕೊಂಡರು.

Baravanige News

Adblock Detected!

Our website is made possible by displaying online advertisements to our visitors. Please consider supporting us by whitelisting our website.

You cannot copy content from Baravanige News

Scroll to Top