ಬೆಚ್ಚ ಬೆಚ್ಚ ನ್ಯೂಸ್
15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿ‌ನ್‌ ಸನಿಲ್‌ ಕುರ್ಕಾಲು!
ಪುತ್ತೂರು : ಮುಸ್ಲಿಂ ಯುವತಿಗೆ ಚೂರಿ ಇರಿದ ಹಿಂದೂ ಯುವಕ : ಆಸ್ಪತ್ರೆಗೆ ದಾಖಲು!
ಬಟ್ಟೆ ಕೊಳ್ಳುವ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ : ಕೊಲೆಯಲ್ಲಿ ಗಲಾಟೆ ಅಂತ್ಯ
ಶಿರ್ವ: ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಂಸ್ಥಾಪಕ ಗೇಬ್ರಿಯಲ್ ನಜರೆತ್ ನಿಧನ
ಅಧಿಕ ಲಾಭಾಂಶ ಆಮಿಷ ; ಹಿರಿಯ ನಾಗರಿಕರಿಗೆ ಲಕ್ಷಾಂತರ ರೂ.ವಂಚನೆ
ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಖಂಡಿಸಿ ಮೆರವಣಿಗೆ, ಮುಷ್ಕರ
ಸೂಡ ಶ್ರೀ ಸುಬ್ರಹ್ಮಣ್ಯ ಕುಣಿತ ಭಜನಾ ಮಂಡಳಿ ಉದ್ಘಾಟನಾ ಸಮಾರಂಭ
ತಂದೆಯನ್ನು ಆಸ್ಪತ್ರೆಗೆ ಸೇರಿಸಿ ಕಾರಿನಲ್ಲಿ ಎಸಿ ಹಾಕಿ ಮಲಗಿದ್ದ ಮಗ ಸಾವು
ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರಿಂದ ಅನುಮತಿ
ಮುಳುವಾದ ಸೌಂದರ್ಯ… ಪತ್ನಿ ನೋಡಲು ಸುಂದರವಾಗಿದ್ದಾಳೆಂದು ಆಕೆಯ ಕಥೆಯನ್ನೇ ಮುಗಿಸಿದ ಪತಿರಾಯ
Next
Prev

ಅರ್ಜುನ ಸಾವಿನ ಬೆನ್ನಲ್ಲೇ ಮತ್ತೊಂದು ಮೈಸೂರು ದಸರಾ ಆನೆ ದುರಂತ ಸಾವು

ಮೈಸೂರು: ದಸರಾದಲ್ಲಿ ಬರೊಬ್ಬರಿ 8 ವರ್ಷ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಾವನ್ನಪ್ಪಿದ ಬೆನ್ನಲ್ಲೇ ಇದೀಗ ಮತ್ತೊಂದು ದಸರಾ ಆನೆ ಮೃತಪಟ್ಟಿದೆ.

ವಿದ್ಯುತ್ ತಂತಿ ತುಳಿದು ದಸರಾ ಆನೆ ಅಶ್ವತ್ಥಾಮ ದುರಂತ ಅಂತ್ಯಕಂಡಿದ್ದಾನೆ. ನಾಗರಹೊಳೆ ಅರಣ್ಯ ಪ್ರದೇಶದ ಗಡಿಯಲ್ಲಿ ಹಾಕಲಾಗಿರುವ ಸೋಲಾರ್ ತಂತಿ ಬೇಲಿಯಲ್ಲಿ ವಿದ್ಯುತ್ ಪ್ರವಹಿಸಿ ಸಾವನಪ್ಪಿದ ಅಶ್ವತ್ಥಾಮ ಸಾವನ್ನಪ್ಪಿದ್ದಾನೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಭೀಮನಕಟ್ಟೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

ಹುಣಸೂರು ಪಿರಿಯಾಪಟ್ಟಣ ಗಡಿ ಭಾಗದಲ್ಲಿರುವ ಆನೆ ಶಿಬಿರದಲ್ಲಿದ್ದ 38 ವರ್ಷದ ಅಶ್ವತ್ಥಾಮ ಆನೆ, ಎರಡು ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗಿಯಾಗಿತ್ತು. 2017ರಲ್ಲಿ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ಅಶ್ವತ್ಥಾಮ ಆನೆಯನ್ನು ಸೆರೆ ಹಿಡಿಯಲಾಗಿತ್ತು. ಬಳಿಕ ಅದನ್ನು ಪಳಗಿಸಿ ಮೈಸೂರು ದಸರಾ ಮಹೋತ್ಸವಕ್ಕೆ ಕರೆತರಲಾಗಿತ್ತು. ಶಾಂತ ಹಾಗೂ ಗಾಂಭಿರ್ಯಕ್ಕೆ ಅಶ್ವತ್ಥಾಮ ಆನೆ ಹೆಸರುವಾಸಿಯಾಗಿತ್ತು.

Related Posts

Scroll to Top