ಉಡುಪಿ: ಜಿಲ್ಲಾಮಟ್ಟದ ಶಿಶು ಶಿಕ್ಷಣ ಶಿಕ್ಷಕರ ತರಬೇತಿ ಕಾರ್ಯಕ್ರಮ

ಜಿಲ್ಲಾ ಶಿಶುವಾಟಿಕಾ ಆಚಾರ್ಯ ಪ್ರಶಿಕ್ಷಣ ವರ್ಗ . ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ಶಿಶುವಾಟಿಕ ಶಿಕ್ಷಕರ ಒಂದು ದಿನದ ಪ್ರಶಿಕ್ಷಣ ವರ್ಗ ಶಾಂತಿಧಾಮ ಪೂರ್ವ ಗುರುಕುಲ ಕೋಟೇಶ್ವರದಲ್ಲಿ ನಡೆಯಿತು .

ಶಿಕ್ಷಕರು ನಿರಂತರ ಹೊಸ ಹೊಸ ವಿಚಾರಗಳನ್ನು ಅಧ್ಯಯನ ಮಾಡುವ ಅನಿವಾರ್ಯತೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕಾಣುತ್ತಿದೆ. ಶಿಕ್ಷಣದ ಬುನಾದಿ ಹಂತದಲ್ಲಿ ಪಂಚಭೂತ ಶಿಕ್ಷಣದ ವ್ಯವಸ್ಥೆಯನ್ನು ಅಳವಡಿಸಿಕೊಂಡು ಶಿಕ್ಷಣವನ್ನು ನೀಡಿದರೆ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಸದೃಢರಾಗುತ್ತಾರೆ . ವಿದ್ಯಾರ್ಥಿಗಳು ತನ್ನ ಮನಸ್ಸಿನ ಒಳಗಿರುವಂತ ಭಾವನೆಗಳನ್ನು ಪ್ರಕಟಿಸುವಂತಹ ಶಿಕ್ಷಕರು ನಾವಾಗಬೇಕು. ಅವನಲ್ಲಿರುವ ಕೆಟ್ಟತನವನ್ನು ಹೋಗಲಾಡಿಸಿ ಒಳ್ಳೆತನವನ್ನು ಅವನಿಗೆ ಅರಿವು ಮಾಡಿಸಿಕೊಡಬೇಕಾದ ಮಾನಸಿಕತೆಯನ್ನು ನಿರ್ಮಾಣ ಮಾಡಿಕೊಡಬೇಕೆಂದು ಶ್ರೀ ಪ್ರೇಮಾನಂದ ಶೆಟ್ಟಿ , ಸದಸ್ಯರು ಶಾಂತಿಧಾಮ ಪೂರ್ವ ಪೂರ್ವ ಗುರುಕುಲ ಕೋಟೇಶ್ವರ ಮಾತನಾಡಿದರು . 

ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಜಿಲ್ಲಾ ಶಿಶುವಾಟಿಕ ಆಚಾರ್ಯರ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಅಧ್ಯಕ್ಷರು ಶ್ರೀಯುತ ಪಾಂಡುರಂಗ ಪೈ ಯವರು ಮಾತನಾಡಿ ಶಿಶುಮಂದಿರದ ಮಾತಾಜಿಯವರ ಸೇವೆ ಅಮೂಲ್ಯವಾದದು. ವಿದ್ಯಾರ್ಥಿಗಳು ನಿರಂತರವಾಗಿ ನೆನಪಿಟ್ಟುಕೊಳ್ಳುವಂತಹ ಶಿಕ್ಷಕರು .ಶಿಕ್ಷಣದ ಬುನಾದಿಯನ್ನು ಹಾಕಿ ಕೊಟ್ಟಿರುವಂತಹ ಮಾತಾಜಿಯವರು ವಿದ್ಯಾರ್ಥಿಗಳ ನೆನಪಿನಂಗಳದಲ್ಲಿ ಮಾಸದ ಮುತ್ತು. ನಿಮ್ಮನ್ನು ನೆನಪಿಸಿಕೊಂಡು ತನ್ನ ಜೀವನದ ಬದಲಾವಣೆಗೆ ಇಂತಹ ಶಿಕ್ಷಕರೇ ಕಾರಣ ಎಂದು ಹೇಳಿದಾಗ ನಿಮ್ಮ ಶಿಕ್ಷಕ ವೃತ್ತಿ ಪೂರ್ಣವಾಗುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಕಾರ್ಯದರ್ಶಿ ಮಹೇಶ್ ಹೈಕಾಡಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಶಾಂತಿಧಾಮ ಪೂರ್ವ ಗುರುಕುಲ ಕೋಟೇಶ್ವರದ ಮಾತಾಜಿ ಶ್ರೀಮತಿ ಪವಿತ್ರ ಸ್ವಾಗತಿಸಿದರು. ಶ್ರೀಮತಿ ಜ್ಯೋತಿ ಮಾತಾಜಿ ವಂದಿಸಿದರು. ಜಿಲ್ಲಾ ಪ್ರಶಿಕ್ಷಣ ವರ್ಗಕ್ಕೆ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳಿಂದ 29 ಶಿಕ್ಷಕರು ಭಾಗವಹಿಸಿದ್ದರು . ವಿದ್ಯಾಭಾರತಿ ಕರ್ನಾಟಕ ಕ್ಷೇತ್ರ ಶಿಶುಶಿಕ್ಷಣ ಪ್ರಮುಖ್ ಶ್ರೀಮತಿ ತಾರಾ ಕೆ ಆಚಾರಿ, ಶ್ರೀಮತಿ ಅನ್ನಪೂರ್ಣ ಶಿವಮೊಗ್ಗ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿಯನ್ನು ನಡೆಸಿಕೊಟ್ಟರು . ವಿದ್ಯಾಭಾರತಿ ಕರ್ನಾಟಕ ಶಿಶು ಮಂದಿರಗಳ ಮಕ್ಕಳಿಗಾಗಿ ಮುದ್ರಣ ಮಾಡಿರುವ ಹೊಸ ಪಠ್ಯಪುಸ್ತಕಗಳಿಗೆ ಅನುಗುಣವಾಗಿ ತರಬೇತಿಯನ್ನು ನೀಡಲಾಯಿತು. ಪ್ರಶಿಕ್ಷಣ ವರ್ಗದ ಸಮಾರೋಪದಲ್ಲಿ ಶಾಂತಿಧಾಮ ಪೂರ್ವ ಗುರುಕುಲ ಕೋಟೇಶ್ವರದ ಸಂಚಾಲಕರಾದ ಶ್ರೀ ಟಿ .ಕೃಷ್ಣರಾಯ ಶಾನುಭಾಗ್ ತರಬೇತಿಯಿಂದ ಶಿಕ್ಷಕರ ವ್ಯಕ್ತಿತ್ವದ ನಿರ್ಮಾಣ ಗಟ್ಟಿಗೊಳ್ಳುತ್ತದೆ. ವಿದ್ಯಾರ್ಥಿಗಳನ್ನು ಸಂಸ್ಕೃತಿಗೆ ಅನುಗುಣವಾಗಿ ಗಟ್ಟಿಗೊಳಿಸುವುದರ ಮೂಲಕ ಸಮಾಜದ ನಿರ್ಮಾಣ ಮಾಡಬಹುದು .ಅದರೊಂದಿಗೆ ರಾಷ್ಟ್ರದ ನಿರ್ಮಾಣವನ್ನು ಮಾಡಬಹುದು . ಶಿಕ್ಷಕರು ಸದಾ ಅಧ್ಯಾಪನ ಅಧ್ಯಯನಶೀಲರಾಗಬೇಕು ಎಂದು ಸಮಾರೋಪ ಮಾತುಗಳನ್ನು ಆಡಿದರು.

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಶಿಶುಶಿಕ್ಷಣ ಪ್ರಮುಖ್ ಶ್ರೀಮತಿ ಪ್ರತಿಮಾ , ಸದಸ್ಯರಾದ ಶ್ರೀ ರಾಮಪ್ರಸಾದ ಭಟ್ , ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀ ಅನಂತ ನಾಯ್ಕ ಉಪಸ್ಥಿತರಿದ್ದರು . ಶ್ರೀಮತಿ ಅಮೃತ ಮಾತಾಜಿ ನಿರೂಪಿಸಿದರು.

Baravanige News

Adblock Detected!

Our website is made possible by displaying online advertisements to our visitors. Please consider supporting us by whitelisting our website.

You cannot copy content from Baravanige News

Scroll to Top