ಕೆಲಸದ ಒತ್ತಡಕ್ಕೆ ಬೇಸತ್ತು ಸೂಸೈಡ್ ಮಾಡಿಕೊಂಡ ರೋಬೋಟ್! ಜಗತ್ತನ್ನೇ ಬೆಚ್ಚಿಬೀಳಿಸೋ ಘಟನೆ!

ಕೆಲಸದ ಒತ್ತಡ ತಾಳಲಾರದೆ ರೋಬೋಟ್ ಒಂದು ಆತ್ಮಹತ್ಯೆ ಮಾಡಿಕೊಂಡಿದೆ ಎನ್ನಲಾದ ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದೆ.

ತನ್ನಿಂದ ಹೆಚ್ಚು ಕೆಲಸ ಮಾಡಿಸಲಾಗುತ್ತಿದೆ ಎಂದು ಒತ್ತಡದಿಂದ ಬೇಸತ್ತು ರೋಬೋಟ್ ಮೆಟ್ಟಿಲುಗಳಿಂದ ಬಿದ್ದು ಸೂಸೈಡ್ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಅದು ಈ ರೀತಿಯ ವಿಚಿತ್ರ ಕೇಸ್ ಬೆಳಕಿಗೆ ಬಂದಿರುವುದು ಮಧ್ಯ ದಕ್ಷಿಣ ಕೊರಿಯಾದಲ್ಲಿ ಅನ್ನೋದು ಗಮನಾರ್ಹ.

ಏನಿದು ಘಟನೆ..?

ವರದಿ ಪ್ರಕಾರ ರೋಬೋಟ್ ಸೌತ್ ಕೊರಿಯಾದ ಗೌಮಿ ನಗರದ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಕೆಲಸ ಮಾಡುತ್ತಿತ್ತು. ಸುಮಾರು ಒಂದು ವರ್ಷದಿಂದ ರೋಬೋಟ್ ಆಡ್ಮಿನಿಸ್ಟ್ರೇಷನ್ ಕೆಲಸದ ಭಾಗವಾಗಿತ್ತು. 5 ದಿನಗಳ ಹಿಂದೆ ರೋಬೋಟ್ ಮೆಟ್ಟಿಲುಗಳ ಮೇಲಿಂದ ಬಿದ್ದು ಸೂಸೈಡ್ ಮಾಡಿಕೊಂಡಿದೆ. ರೋಬೋಟ್‌ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವರ್ಕಿಂಗ್ ಕಂಡೀಷನ್ನಲ್ಲಿ ಇರಲಿಲ್ಲ. ರೋಬೋಟ್ ಓಡಿ ಹೋಗಿ ಸೂಸೈಡ್ ಮಾಡಿಕೊಂಡಿದೆ ಎಂದು ಘಟನೆ ನೋಡಿದ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎನ್ನಲಾಗಿದೆ.

ಹೆಚ್ಚು ಕೆಲಸ ಮಾಡಿಸುತ್ತಿದ್ದ ಕಾರಣ ರೋಬೋಟ್ ಒತ್ತಡಕ್ಕೆ ಒಳಗಾಗಿತ್ತು. ಇದನ್ನು ಡಿಸೈನ್ ಮಾಡಿದ ಕಂಪನಿ ಕೂಡ ಅದೇ ಹೇಳುತ್ತಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸೌತ್ ಕೊರಿಯಾ ಸರ್ಕಾರಿ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

Baravanige News

Adblock Detected!

Our website is made possible by displaying online advertisements to our visitors. Please consider supporting us by whitelisting our website.

You cannot copy content from Baravanige News

Scroll to Top