ಮಂಗಳೂರು: ನಗರದ ಪಂಪ್ವೆಲ್ ನಲ್ಲಿ ಅಂಗಡಿ ಕಳವು, ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಮೂರು ಮನೆಗಳಲ್ಲಿ ಕಳ್ಳತನ ಪ್ರಕರಣದ ಒಟ್ಟು ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಕಂಕನಾಡಿ ಠಾಣಾ ವ್ಯಾಪ್ತಿಯ ಪಂಪ್ವೆಲ್ ಸಮೀಪದ ಅಂಗಡಿಯಲ್ಲಿ ಜು.8 ರಂದು 10 ಲ.ರೂ ಕಳವು ಮಾಡಿದ್ದ ಉತ್ತರ ಪ್ರದೇಶದ ಮಹಮ್ಮದ್ ನಜೀರ್ ಹೌಸಿಲ್ ಖಾನ್(27) ಮತ್ತು ಇಲಿಯಾಸ್ ಖಾನ್ ನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ವಶದಿಂದ ಹತ್ತು ಲಕ್ಷ ರೂ. ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಕಳ್ಳತನ ಪ್ರಕರಣಗಳ ಆರೋಪಿಗಳಾದ ಮಹಮ್ಮದ್ ಸಿಯಾಬ್, ಮಹಮ್ಮದ್ ಅರ್ಪಾಜ್, ಸಪ್ವಾನ್, ಮೊಹಮ್ಮದ್ ಜಂಶೀರ್ ನನ್ನು ಬಂಧಿಸಲಾಗಿದೆ.
ಆರೋಪಿಗಳ ವಶದಲ್ಲಿದ್ದ ಚಿನ್ನಾಭರಣ ಸೇರಿದಂತೆ 12.50 ಲ.ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ತಿಳಿಸಿದ್ದಾರೆ.