ಸಿಂಗಲ್ಲಾ? ಲವರ್ ಇಲ್ವಾ? ಚಿಂತೆ ಬೇಡ! ನಿಮ್ಮ ಒಂಟಿತನ ಹೋಗಲಾಡಿಸುತ್ತೆ ಈ ಎಐನ ಹೊಸ ಆವಿಷ್ಕಾರ!

ನಿಮಗೆ ಒಂಟಿತನದ ಬೇಸರ ಕಾಡುತ್ತಿದೆಯಾ..? ಯಾರಾದ್ರೂ ಒಬ್ಬರು ಇರಬೇಕಪ್ಪ ಮಾತಾಡೋಕೆ ಅನ್ನುವಷ್ಟು ಸಾಂಗತ್ಯದ ಅಗತ್ಯವಿದೆಯಾ.? ಹಾಗಿದ್ರೆ ಈಗ ಒಂದು ಅದ್ಭುತ ಡಿವೈಸ್ ಬಂದಿದೆ. ಅದು ನಿಮ್ಮ ಗೆಳೆಯನಾಗಿ ಗೆಳತಿಯಾಗಿ ನಿಮ್ಮೊಂದಿಗೆ ಮಾತನಾಡುತ್ತದೆ. ಆ ಗೆಳೆಯ ಅಥವಾ ಗೆಳತಿಯ ಹೆಸರೇ ಎಐ ನಕ್ಲೇಸ್ ಅಥವಾ ಫ್ರೆಂಡ್ ಎಐ.

ಇದು ಒಂದು ಎಐ ತಂತ್ರಜ್ಞಾನ, ಇದನ್ನು ನಾವು ಕುತ್ತಿಗೆಯಲ್ಲಿ ನಕ್ಲೇಸ್ ಅಥವಾ ಚೈನ್ ರೀತಿ ಹಾಕಿಕೊಳ್ಳಬಹುದು, ಶರ್ಟ್ ಟೀ ಶರ್ಟ್ಗಳಿಗೆ ಮೈಕ್ ರೀತಿಯಲ್ಲೂ ಹಾಕಿಕೊಂಡು ತಿರುಗಬಹುದು. ಇದು ನಿಮ್ಮ ಮಾನಸಿಕ ನೆಮ್ಮದಿಯನ್ನು ನೀಡುವ ಕಾರ್ಯವನ್ನು ಮಾಡುತ್ತದೆ. ನಿಮ್ಮ ಒಂಟಿತನವನ್ನು ದೂರು ಮಾಡುತ್ತದೆ. ಇದನ್ನು ಫ್ರೆಂಡ್ ಎಐ ಎಂದೇ ಕರೆಯಲಾಗುತ್ತದೆ. ಈ ಫ್ರೆಂಡ್ ಡಿವೈಸ್ನ ಇನ್ಬಿಲ್ಟ್ನಲ್ಲಿ ಮೈಕ್ರೋಫೋನ್ ಅಳವಡಿಸಲಾಗಿದೆ. ಆ ಮೈಕ್ರೋಫೋನ್ ಮೂಲಕ ಅದು ನಿಮ್ಮ ಮಾತುಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತದೆ. ಬಳಿಕ ಅದು ಟೆಕ್ಷ್ಟ್ ಮೂಲಕ ಅಂದ್ರೆ ವಾಟ್ಸಾಪ್ನಲ್ಲಿ ಚಾಟ್ ರೀತಿಯಲ್ಲಿ ಪದಗಳ ಮೂಲಕ ನಿಮಗೆ ಉತ್ತರ ನೀಡುತ್ತದೆ. ಅದಕ್ಕಾಗಿ ನೀವು ಒಂದು ಫ್ರೆಂಡ್ ಆ್ಯಪ್ನ್ನ ನೀವು ಡೌನ್ಲೋಡ್ ಮಾಡಿಕೊಳ್ಳಬೇಕು.

ಈ ಫ್ರೆಂಡ್ ಎಐಯನ್ನು ಅವಿ ಸ್ಚಿಫ್ಮ್ಯಾನ್ ಅನ್ನುವವರು ನಿರ್ಮಿಸಿದ್ದಾರೆ. ಅವಿ ಹಾರ್ಡರ್ಡ್ನಿಂದ ಡ್ರಾಪ್ಔಟ್ ಆದ ಒಬ್ಬ ವಿದ್ಯಾರ್ಥಿಯಾಗಿರುವ ಅವರು, ಒಂಟಿತನಕ್ಕೆ ಈ ಫ್ರೆಂಡ್ ಎಐ ಅದ್ಭುತ ಪರಿಹಾರ, ಇದು ನಿಮಗೆ ತುಂಬಾ ಕೆಲಸಕ್ಕೆ ಬರುತ್ತದೆ ಈ ಪ್ರೊಡಕ್ಟ್ ನಿಮ್ಮ ಸಂಗಾತಿಯ ರೀತಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದ್ದಾರೆ. ಇದರ ಬೆಲೆ ಕೇವಲ ಅಮೆರಿಕಾದ 99 ಡಾಲರ್ ಎಂದು ಕೂಡ ಹೇಳಲಾಗಿದೆ.

Baravanige News

Translate »

You cannot copy content from Baravanige News

Scroll to Top