ಶಿರ್ವ : ಮರಗಳ ಅಪಾಯಕಾರಿ ರೆಂಬೆ ತೆರವು

ಶಿರ್ವ : ಕಟಪಾಡಿ- ಶಿರ್ವ-ಬೆಳ್ಮಣ್‌ ಮುಖ್ಯರಸ್ತೆಯ ಹನುಮಾನ್‌ ಟಯರ್ ಬಳಿ ರಸ್ತೆಗೆ ಚಾಚಿಕೊಂಡು ಅಪಾಯಕಾರಿಯಾಗಿ ಪರಿಣಮಿಸಿದ್ದ 2 ಬೃಹತ್‌ ಮಾವಿನ ಮರಗಳ ರೆಂಬೆ ಮತ್ತು ರಸ್ತೆ ಬದಿಯಲ್ಲಿದ್ದ ಇತರೆ ಅಪಾಯಕಾರಿ ಮರಗಳ ರೆಂಬೆಗಳನ್ನು ಅರಣ್ಯ ಇಲಾಖೆ ಕಡಿದು ತೆರವುಗೊಳಿಸಿದೆ.

ಪಡುಬಿದ್ರಿ ಉಪ ವಲಯ ಅರಣ್ಯಾಧಿಕಾರಿ ಜೀವನ್‌ದಾಸ್‌ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಅರಣ್ಯ ರಕ್ಷಕ ಚರಣ್‌ಜೋಗಿ ಅವರ ನೇತೃತ್ವದಲ್ಲಿ ಮಹಮ್ಮದ್‌ ಅಶ್ರಫ್‌ ಅವರ ಸಿಬಂದಿಯ ನೆರವಿನೊಂದಿಗೆ ಮರದ ರೆಂಬೆಗಳನ್ನು ಕಡಿದು ತೆರವುಗೊಳಿಸಲಾಯಿತು.

ಶಿರ್ವ ಮೆಸ್ಕಾಂ ಸೆಕ್ಷನ್‌ ಆಫೀಸರ್‌ ಮಂಜಪ್ಪ ಮತ್ತು ಸಿಬಂದಿ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಿ ತಂತಿಗಳನ್ನು ಇಳಿಸಿ ಕೊಂಬೆ ಕಡಿಯಲು ಸಹಕರಿಸಿದರು.

Baravanige News

Translate »

You cannot copy content from Baravanige News

Scroll to Top