ಡೋನ್ ಬೊಸ್ಕೊ ಇಂಗ್ಲಿಷ್ ಮಾಧ್ಯಮ ಶಾಲೆ ಶಿರ್ವ, ಸ್ಕೌಟ್ಸ್ & ಗೈಡ್ಸ್ ಮಕ್ಕಳಿಂದ – “ನಮ್ಮ ನಡೆ ಕೃಷಿಯ ಕಡೆ” ಕಾರ್ಯಕ್ರಮ

ಡೋನ್ ಬೋಸ್ಕೋ ಇಂಗ್ಲಿಷ್ ಮಾಧ್ಯಮ ಶಾಲೆ ಶಿರ್ವ,
ಸ್ಕೌಟ್ ಅಂಡ್ ಗೈಡ್ ನ ಸುಮಾರು 100 ಮಕ್ಕಳಿಗೆ
ನೇಜಿ ನೆಡುವ ಪ್ರತ್ಯಕ್ಷತೆ ಹಾಗೂ ಭತ್ತ ಬೆಳೆಯ ಮಾಹಿತಿ ಹಾಗೂ ರೈತರ ಸೇವೆಯ ಬಗ್ಗೆ ಮಾಹಿತಿ
ಕಾರ್ಯಕ್ರಮವು ಇಂದು ಬಂಟಕಲ್ಲಿನಲ್ಲಿ ವಿಜಯ್ ಧೀರಜ್ ಅವರ ಗದ್ದೆಯಲ್ಲಿ ನಡೆಯಿತು.

ವೇದಿಕೆಯಲ್ಲಿ ಶಿರ್ವ ಶಾಲೆಯ correspondent
Rev. Fr. ಲೆಸ್ಲೀ ಡಿಸೋಜಾ, ಪ್ರಿನ್ಸಿಪಾಲ್ rev. Fr. ರೋಲ್ವಿನ್ ಜೋಯ್ ಅರನ್ನ, ಲಯನ್ಸ್ ಕ್ಲಬ್ ಬಂಟಕಲ್ಲು ಇದರ ಅಧ್ಯಕ್ಷರಾದ ಲ.ಉಮೇಶ್ ಕುಲಾಲ್, ಉದ್ಯಮಿ/ಕೃಷಿಕ ವಿಜಯ್ ಧೀರಜ್ ಉಪಸ್ಥಿತರಿದ್ದರು.

ನಾವು ನಿಮ್ಮನ್ನು ರೈತರನ್ನಾಗಿ ಮಾಡಲು ಕಲಿಸುತ್ತಿಲ್ಲ, ಆದರೆ ನೀವು ರೈತರು ಹೇಗೆ ಬದುಕುತ್ತಾರೆ & ನಾವು ಊಟ ಮಾಡುವ ಅಕ್ಕಿ ಹೇಗೆ ಮತ್ತು ಎಲ್ಲಿಂದ ತಯಾರು ಆಗುತ್ತದೆ ಎಂಬ ಮಾಹಿತಿಯನ್ನು ವಿಜಯ್ ಧೀರಜ್ ರವರು ನೀಡಿದರು.

ಜೈ ಜವಾನ್, ಜೈ ಕಿಸಾನ್, ನಾವು ಯಾವ ರೀತಿಯಲ್ಲಿ ಸೈನಿಕರನ್ನು ಹಾಗೂ ರೈತರನ್ನು ಗೌರವಿಸಬೇಕು ಎಂದು Rev fr. ಲೆಸ್ಲೀ ರವರು ತಿಳಿಸಿದರು.

ನಮ್ಮ ಸಂಸ್ಥೆ ಮಕ್ಕಳಿಗೆ ವಿನೂತನ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಇವತ್ತು, ಇಲ್ಲಿ ನೆರೆದಂಥ ಎಲ್ಲಾ ಮಕ್ಕಳು ಅದೃಷ್ಟವಂತರು ಎಂದು rev. Fr. ರೋಲ್ವಿನ್ ಜೋಯ್ ಹೇಳಿದರು.

ಲ. ಉಮೇಶ್ ಅವರು ಮಾತನಾಡಿ ನಮ್ಮ ಲಯನ್ಸ್ ಸಂಸ್ಥೆಯಿಂದ ಒಂದು ಸಣ್ಣ ಪ್ರಯತ್ನ ಮಾಡಿದ್ದೇವೆ, ಮುಂದಿನ ದಿನಗಳಲ್ಲಿ ಇನ್ನೂ ಬಗೆ ಬಗೆಯ ಸೇವಾ ಕಾರ್ಯಕ್ರಮ ಚಟುವಟಿಕೆ ಗಳನ್ನು ನಿಮ್ಮ ಮುಂದೆ ತರಲಿದ್ದೇವೆ ಎಂದರು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಮುಖ್ಯ ಗುರುಗಳಾದ ಉಮೇಶ್ ಅತಿಥಿಗಳನ್ನು ಸ್ವಾಗತಿಸಿದರು.

ಶಾಲಾ ವಿದ್ಯಾರ್ಥಿನಿ ಕುಮಾರಿ ಆಶಿನಿ ಸಿಯೋನ ಸಲ್ದಾನ್ಹ ಕಾರ್ಯಕ್ರಮ ನಿರೂಪಿಸಿ, ಲ. ಜೋಸಿಲ್ ನೊರೂನ್ನಾ ಧನ್ಯವಾದ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ 75 ಕ್ಕೂ ಅಧಿಕ ಗ್ರಾಮಸ್ಥರು, ಲಯನ್ಸ್ ಸದಸ್ಯರು ಹಾಗೂ 100 ಮಂದಿ ಶಾಲಾ ಮಕ್ಕಳು ಭಾಗವಹಿಸಿದ್ದರು.

Baravanige News

Translate »

You cannot copy content from Baravanige News

Scroll to Top