ಕುಂದಾಪುರ : ದೇಶಾದ್ಯಂತ ೭೮ನೇ ಸ್ವಾತಂತ್ರ‍್ಯೋತ್ಸವವನ್ನು ಬಹಳ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಅಂತೆಯೇ ಸಿನಿತಾರೆಯರು ಕೂಡಾ ದೇಶಪ್ರೇಮದಿಂದಲೇ ಸ್ವಾತಂತ್ರ‍್ಯೋತ್ಸವವನ್ನು ಆಚರಿಸಿದ್ದಾರೆ.
ಅದರಲ್ಲೂ ಕಾಂತಾರದ ಮೂಲಕ ವಿಶ್ವವಿಖ್ಯಾತಿಗೊಂಡ ರಿಷಭ್ ಶೆಟ್ಟಿ ಸ್ವಾತಂತ್ರ‍್ಯೋತ್ಸವ ಆಚರಣೆಯಲ್ಲಿ ಭಾಗಿಯಾದುದರ ವಿಶೇಷ ಸಮಯವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಟ ರಿಷಭ್ ಶೆಟ್ಟಿ ಹುಟ್ಟೂರು ಕೆರಾಡಿಯಲ್ಲಿ ಸ್ವಾತಂತ್ರ‍್ಯೋತ್ಸವ ಆಚರಿಸಿ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಹುಟ್ಟೂರು ಕೆರಾಡಿಯ ಸರ್ಕಾರಿ ಶಾಲೆಯಲ್ಲಿ ‘ಕಾಂತಾರ’ ಸ್ಟಾರ್ ರಿಷಬ್ ಶೆಟ್ಟಿ ರಾಷ್ಟ್ರ ಧ್ವಜ ಹಾರಿಸಿ ಸ್ವಾತಂತ್ರ‍್ಯೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಸಮಾರಂಭದ ಫೋಟೋಗಳನ್ನು ಶೇರ್ ಮಾಡಿ, ನಾಡಿನ ಸಮಸ್ತ ಜನತೆಗೆ 78 ನೇ ಸ್ವಾತಂತ್ರ‍್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಎಂದು ಬರೆದು ಶುಭಕೋರಿದ್ದಾರೆ.