ಉಡುಪಿ : ಸಿವಿಲ್ ಹೆಡ್ ಕಾನ್ ಸ್ಟೇಬಲ್ ವಿಜಯ್ ಕುಮಾರ್ ಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ

ಉಡುಪಿ : ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯ ಡಿಸಿಆರ್ ಬಿ ವಿಭಾಗದಲ್ಲಿ ಸಿವಿಲ್ ಹೆಡ್ ಕಾನ್ ಸ್ಟೇಬಲ್ ಆಗಿ ಸೇವೆಸಲ್ಲಿಸುತ್ತಿರುವ ಬಿ.ವಿಜಯ್ ಕುಮಾರ್ ಅವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಲಭಿಸಿದೆ.

ಇವರು 1993 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದರು. ಈತನಕ ಪಣಂಬೂರು ,ಪುತ್ತೂರು ನಗರ ,ಉರ್ವ ,ಉಡುಪಿ ನಗರ ,ಕುಂದಾಪುರ ,ಉಡುಪಿ ಟ್ರಾಫಿಕ್ ,ಉಡುಪಿ ಮಹಿಳಾ ಠಾಣೆ ಮತ್ತು ಹಿರಿಯಡ್ಕ ಠಾಣೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. 2022 ರಲ್ಲಿ ಇವರು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದರು

Scroll to Top