ಬೆಂಗಳೂರು: ಮುಡಾ ಅಕ್ರಮ ಕೇಸ್‌ಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರಿಂದ ಅನುಮತಿ ದೊರೆತಿದೆ. ಅಬ್ರಹಾಂ ಎಂಬವರು ನೀಡಿದ್ದ ಖಾಸಗಿ ದೂರಿನ ಆಧಾರದಲ್ಲಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಪತ್ರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ರಾಜ್ಯಪಾಲರು ರವಾನಿಸಿದ್ದಾರೆ.
ಸಿಎಂ ಕುಟುಂಬದ ಪ್ರಭಾವದ ಎರಡು ಅಂಶಗಳನ್ನು ರಾಜ್ಯಪಾಲರು ಉಲ್ಲೇಖಿಸಿದ್ದಾರೆ. ಸಿದ್ದರಾಮಯ್ಯ ಪತ್ನಿ ಪಾರ್ವತಿ, ಪುತ್ರ ಯತೀಂದ್ರ ಸಿದ್ದರಾಮಯ್ಯ ಪ್ರಭಾವದ ಬಗ್ಗೆ ಉಲ್ಲೇಖವಾಗಿದೆ. ಸಿದ್ದರಾಮಯ್ಯ ಸಿಎಂ ಆಗುವ ತನಕ ಪಾರ್ವತಿ ಕಾದು, ಆ ಬಳಿಕ ಅರ್ಜಿ ಹಾಕಿದ್ದಾರೆ. 2010 ರಲ್ಲಿ ಪಾರ್ವತಿ ಜಮೀನು ಮಾಲೀಕರಾದರೂ ಪರಿಹಾರಕ್ಕೆ ಅರ್ಜಿ ಹಾಕಲು 4 ವರ್ಷ ಕಾಯುತ್ತಾರೆ. ಸಿದ್ದರಾಮಯ್ಯ ಸಿಎಂ ಆದ್ಮೇಲೆ 40:60 ಸೈಟ್ ಪರಿಹಾರ ಅನುಪಾತ, 50:50 ಆಯ್ತು. ಪಾಲಿಸಿ ಬದಲಾವಣೆಗೆ ಆಗಿನ ಸಿದ್ದರಾಮಯ್ಯ ಕ್ಯಾಬಿನೆಟ್ ಅನುಮತಿ ನೀಡಿತ್ತು. ಸಿದ್ದರಾಮಯ್ಯ ಪತ್ನಿ ಕೊಟ್ಟ ಅರ್ಜಿಯ ಆಧಾರದ ಮೇಲೆ ಪಾಲಿಸಿ ಬದಲಾವಣೆ ಮಾಡಿದ್ರು. ಆ ನಂತರ ಪರಿಹಾರ ನೀಡುವ ಸಂಬಂಧ ನಡೆದ ಮುಡಾ ಸಭೆಯಲ್ಲಿ ಶಾಸಕರಾಗಿದ್ದ ಯತೀಂದ್ರ ಇದ್ದರು ಎಂದು ಪ್ರಭಾವದ ಬಗ್ಗೆ ಉಲ್ಲೇಖಿಸಲಾಗಿದೆ.
ದೂರುದಾರ ಟಿ.ಜೆ.ಅಬ್ರಹಾಂ ಮತ್ತು ಸಾಮಾಜಿಕ ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ, ಪ್ರದೀಪ್ ರನ್ನು ರಾಜಭವನಕ್ಕೆ ಬರುವಂತೆ ಆಹ್ವಾನಿಸಲಾಗಿದೆ.ಬೆಂಗಳೂರು : ಮುಡಾ ಅಕ್ರಮ ಕೇಸ್‌ಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರಿಂದ ಅನುಮತಿ ದೊರೆತಿದೆ. ಅಬ್ರಹಾಂ ಎಂಬವರು ನೀಡಿದ್ದ ಖಾಸಗಿ ದೂರಿನ ಆಧಾರದಲ್ಲಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಪತ್ರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ರಾಜ್ಯಪಾಲರು ರವಾನಿಸಿದ್ದಾರೆ.
ಸಿಎಂ ಕುಟುಂಬದ ಪ್ರಭಾವದ ಎರಡು ಅಂಶಗಳನ್ನು ರಾಜ್ಯಪಾಲರು ಉಲ್ಲೇಖಿಸಿದ್ದಾರೆ. ಸಿದ್ದರಾಮಯ್ಯ ಪತ್ನಿ ಪಾರ್ವತಿ, ಪುತ್ರ ಯತೀಂದ್ರ ಸಿದ್ದರಾಮಯ್ಯ ಪ್ರಭಾವದ ಬಗ್ಗೆ ಉಲ್ಲೇಖವಾಗಿದೆ. ಸಿದ್ದರಾಮಯ್ಯ ಸಿಎಂ ಆಗುವ ತನಕ ಪಾರ್ವತಿ ಕಾದು, ಆ ಬಳಿಕ ಅರ್ಜಿ ಹಾಕಿದ್ದಾರೆ. 2010 ರಲ್ಲಿ ಪಾರ್ವತಿ ಜಮೀನು ಮಾಲೀಕರಾದರೂ ಪರಿಹಾರಕ್ಕೆ ಅರ್ಜಿ ಹಾಕಲು 4 ವರ್ಷ ಕಾಯುತ್ತಾರೆ. ಸಿದ್ದರಾಮಯ್ಯ ಸಿಎಂ ಆದ್ಮೇಲೆ 40:60 ಸೈಟ್ ಪರಿಹಾರ ಅನುಪಾತ, 50:50 ಆಯ್ತು. ಪಾಲಿಸಿ ಬದಲಾವಣೆಗೆ ಆಗಿನ ಸಿದ್ದರಾಮಯ್ಯ ಕ್ಯಾಬಿನೆಟ್ ಅನುಮತಿ ನೀಡಿತ್ತು. ಸಿದ್ದರಾಮಯ್ಯ ಪತ್ನಿ ಕೊಟ್ಟ ಅರ್ಜಿಯ ಆಧಾರದ ಮೇಲೆ ಪಾಲಿಸಿ ಬದಲಾವಣೆ ಮಾಡಿದ್ರು. ಆ ನಂತರ ಪರಿಹಾರ ನೀಡುವ ಸಂಬಂಧ ನಡೆದ ಮುಡಾ ಸಭೆಯಲ್ಲಿ ಶಾಸಕರಾಗಿದ್ದ ಯತೀಂದ್ರ ಇದ್ದರು ಎಂದು ಪ್ರಭಾವದ ಬಗ್ಗೆ ಉಲ್ಲೇಖಿಸಲಾಗಿದೆ.
ದೂರುದಾರ ಟಿ.ಜೆ.ಅಬ್ರಹಾಂ ಮತ್ತು ಸಾಮಾಜಿಕ ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ, ಪ್ರದೀಪ್ ರನ್ನು ರಾಜಭವನಕ್ಕೆ ಬರುವಂತೆ ಆಹ್ವಾನಿಸಲಾಗಿದೆ.