ಬೆಚ್ಚ ಬೆಚ್ಚ ನ್ಯೂಸ್
ಉಡುಪಿ ಡಿಸ್ಟ್ರಿಕ್ಟ್ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಶನ್ ರಿ. ಉಡುಪಿ – ವಾರ್ಷಿಕ ಮಹಾಸಭೆ!
15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿ‌ನ್‌ ಸನಿಲ್‌ ಕುರ್ಕಾಲು!
ಪುತ್ತೂರು : ಮುಸ್ಲಿಂ ಯುವತಿಗೆ ಚೂರಿ ಇರಿದ ಹಿಂದೂ ಯುವಕ : ಆಸ್ಪತ್ರೆಗೆ ದಾಖಲು!
ಬಟ್ಟೆ ಕೊಳ್ಳುವ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ : ಕೊಲೆಯಲ್ಲಿ ಗಲಾಟೆ ಅಂತ್ಯ
ಶಿರ್ವ: ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಂಸ್ಥಾಪಕ ಗೇಬ್ರಿಯಲ್ ನಜರೆತ್ ನಿಧನ
ಅಧಿಕ ಲಾಭಾಂಶ ಆಮಿಷ ; ಹಿರಿಯ ನಾಗರಿಕರಿಗೆ ಲಕ್ಷಾಂತರ ರೂ.ವಂಚನೆ
ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಖಂಡಿಸಿ ಮೆರವಣಿಗೆ, ಮುಷ್ಕರ
ಸೂಡ ಶ್ರೀ ಸುಬ್ರಹ್ಮಣ್ಯ ಕುಣಿತ ಭಜನಾ ಮಂಡಳಿ ಉದ್ಘಾಟನಾ ಸಮಾರಂಭ
ತಂದೆಯನ್ನು ಆಸ್ಪತ್ರೆಗೆ ಸೇರಿಸಿ ಕಾರಿನಲ್ಲಿ ಎಸಿ ಹಾಕಿ ಮಲಗಿದ್ದ ಮಗ ಸಾವು
ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರಿಂದ ಅನುಮತಿ
Next
Prev

ಉಡುಪಿ ಡಿಸ್ಟ್ರಿಕ್ಟ್ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಶನ್ ರಿ. ಉಡುಪಿ – ವಾರ್ಷಿಕ ಮಹಾಸಭೆ!

ಉಡುಪಿ ಡಿಸ್ಟ್ರಿಕ್ಟ್ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಶನ್ ರಿ. ಉಡುಪಿ ಇದರ ವಾರ್ಷಿಕ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮ ಶ್ರೀಯುತ ಎಂ ಕೆ ದಿನೇಶ್ ರವರ ಅಧ್ಯಕ್ಷತೆಯಲ್ಲಿ ಗೌರವಾಧ್ಯಕರಾದ ಶ್ರೀಯುತ ದಾಮೋದರ್ ಪೈ ದೀಪ ಬೆಳಗಿಸುದರ ಮುಖೇನ ಉದ್ಯಾವರ ಬಲಾಯಿಪಾದೆ ನಿತ್ಯಾನಂದ ಆರ್ಕೇಡ್ ನ ಸಭಾಭವನದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ಭಾರತಮಾತೆಗೆ ಪುಷ್ಪಾರ್ಚನೆಗೈಯುತ್ತಾ, ಪ್ರಾಕ್ರತಿಕ ವಿಕೋಪದಡಿ ಪ್ರಾಣ ಕಳೆದುಕೊಂಡವರಿಗೆ ಶ್ರಧ್ಧಾಂಜಲಿ ಸಲ್ಲಿಸುತ್ತಾ, ಉಪಾಧ್ಯಕ್ಷರಾದ ಶ್ರೀಯುತ ಜಯಪ್ರಸಾದ್ ಕುಂದಾಪುರರವರು ಸಭೆಯ ಕರೆಯೋಲೆ ಪತ್ರ ಓದಿದರು. ಸಂಘಟನಾ ಕಾರ್ಯದರ್ಶಿಯವರಾದ ಶ್ರೀಯುತ ಸುನೀಲ್ ಬ್ರಹ್ಮಾವರರವರು ವರದಿವಾಚನ ಮಂಡಿಸಿದರು.. ಪ್ರಧಾನ ಕಾರ್ಯದರ್ಶಿಯವರಾದ ಶ್ರೀಯುತ ಗಿರೀಶ್ ಮಲ್ಪೆರವರು ಲೆಕ್ಕ ಪತ್ರಮಂಡನೆ ಮಾಡಿದರು. ಗೌರವಾಧ್ಯಕ್ಷರಾದ ಶ್ರೀಯುತ ಅಕ್ಬರ್ ಎಸ್ ಕೆ ರವರು ಸದಸ್ಯರ ಗುರುತು ಚೀಟಿಯನ್ನು ಬಿಡುಗಡೆ ಮಾಡುತ್ತಾ ಅದರ ಮಹತ್ವವನ್ನು ತಿಳಿಸಿದರು.
ಹೊಸ ಫ್ಲೆಕ್ಸ್ ಯುನಿಟ್ ಸದಸ್ಯರುಗಳಾದ ಶ್ರೀಯುತ ವಾಸುದೇವ ಭಟ್, ಎನ್ ಪಿ ಪ್ರಿಂಟಿಂಗ್ ಕಾರ್ಕಳ, ಶ್ರೀಯುತ ಪ್ರಕಾಶ್, ಫ್ಯೂಚರ್ ಗ್ರಾಫಿಕ್ಸ್ ಸಾಲಿಗ್ರಾಮ, ಶ್ರೀಯುತ ಸುರೇಂದ್ರ ಆಚಾರ್ಯ, ಸಾಯಿ ಫ್ಲೆಕ್ಸ್ ಕಟಪಾಡಿ, ಶ್ರೀಯುತ ಹರೀಶ್, ಅಯೋಧ್ಯ ಡಿಜಿಟಲ್ ಉಡುಪಿ, ಶ್ರೀಯುತ ಸುಖೇಶ್ ಶೆಟ್ಟಿ,ಪ್ರಿಂಟ್ ಪ್ರೋ ಉಡುಪಿ ಇವರನ್ನು ಸೇರ್ಪಡೆಗೊಳಿಸಲಾಯಿತು..

ಫ್ಲೆಕ್ಸ್ ಯುನಿಟ್ ನಲ್ಲಿ ಸಹಮಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಕಳ ಅಮೂಲ್ಯ ಡಿಜಿಟಲ್ ನ ಶ್ರೀಮತಿ ಪುಷ್ಪಲತಾ ಅಶೋಕ್, ಮೂಡಬಿದ್ರಿ ದಿನೇಶ್ ಗ್ಲೋ ಸೖನ್ ನ ಶ್ರೀಮತಿ ಶಾಂತಿ ದಿನೇಶ್, ಕೋಟೇಶ್ವರ ಸೖನ್ ಹೌಸ್ ಪ್ರಿಂಟ್ ನ ಶ್ರೀಮತಿ ಜ್ಯೋತಿಗಣೇಶ್, ಬ್ರಹ್ಮಾವರ ಮಯೂರ ಫ್ಲೆಕ್ಸ್ ನ ಶ್ರೀಮತಿ ನಮ್ರತಾ ಮಧುಸೂಧನ್, ಕುಂದಾಪುರ ಪ್ರಿಂಟ್ ಪ್ಯಾಲೇಸ್ ನ ಶ್ರೀಮತಿ ಪುಷ್ಪಲತಾ ಎಚ್ ಶೆಟ್ಟಿ ಹಾಗೂ ಮಹಿಳಾ ಉದ್ಯೋಗಿಯಾಗಿ ಉಡುಪಿ ಗಾಯತ್ರಿ ಡಿಜಿಟಲ್ ಪ್ಯಾಲೇಸ್ ನ ಶ್ರೀಮತಿ ಆಶಾಲತಾ ಕುಮಾರ್ ಫಲಿಮಾರ್ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು..

ಸಂಘಕ್ಕೆ ಸಲ್ಲಿಸಿದ ಸೇವೆಗಾಗಿ ನಿಕಟಪೂರ್ವ ಅಧ್ಯಕ್ಷರಾದ ಶ್ರೀಯುತ ರಾಜೇಶ್ ಕುಮಾರ್ ಅಂಬಾಡಿ ಹಾಗೂ ಸಂಘದ ಬೆಳವಣಿಗೆಯಲ್ಲಿ ಬಹುಮುಖ್ಯ ಕೊಡುಗೆ ಸಲ್ಲಿಸಿದ ಶ್ರೀಯುತ ಅನಿಲ್ ಕುಮಾರ್ ಶೆಟ್ಟಿಯವರನ್ನು ಗುರುತಿಸಿ ಸನ್ಮಾನಿಸಲಾಯಿತು..
ಅಧ್ಯಕ್ಷೀಯ ಮಾತಿನಲ್ಲಿ ಶ್ರೀಯುತ ದಿನೇಶ್ ರವರು ತನ್ನ ಮುಂದಿನ ಯೋಜನೆಗಳ ಬಗ್ಗೆ ಮಾತನಾಡುತ್ತಾ ಸದಸ್ಯರ ಸಹಕಾರ ಕೋರಿದರು. ಶ್ರೀಯುತ ಪ್ರಸನ್ನ ಭಟ್ ಮಂಗಳೂರ್ ರವರು ಫ್ಲೆಕ್ಸ್ ಉದ್ಯಮದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ ಬಗ್ಗೆ ಮಾಹಿತಿ ನೀಡಿದರು. ಸನ್ಮಾನಿತರ ಪರವಾಗಿ ಶ್ರೀಯುತ ಅಶೋಕ್ ಶೆಟ್ಟಿಗಾರ್ ರವರು ಅಭಿನಂದನಾ ನುಡಿಗಳನ್ನಾಡಿದರು..
ಸಂಘದ ಪ್ರಧಾನಕಾರ್ಯದರ್ಶಿಯವರಾದ ಶ್ರೀಯುತ ಗಿರೀಶ್ ರವರು ಸ್ವಾಗತಿಸಿದರು, ಪ್ರಸನ್ನ ಶೆಟ್ಟಿಗಾರ್ ಅಜೆಕಾರ್ ಕಾರ್ಯಕ್ರಮ ನಿರೂಪಿಸಿದರು, ಸಂಘಟನಾ ಕಾರ್ಯದರ್ಶಿಯವರಾದ ಶ್ರೀಯುತ ಸುನೀಲ್ ಕುಮಾರ್ ಬ್ರಹ್ಮಾವರ ಧನ್ಯವಾದ ತಿಳಿಸಿದರು.

Related Posts

Scroll to Top