ಶಿರ್ವ: ಒಣಗಲು ಹಾಕಿದ್ದ ಸಾವಿರಾರು ರೂ. ಮೌಲ್ಯದ ಅಡಿಕೆಯನ್ನು ಕಳ್ಳರು ಕಳವು ಮಾಡಿರುವ ಘಟನೆ ನಡೆದಿದೆ.
ಕುತ್ಯಾರಿನ ಸಂತೋಷ್ ಎಂಬವರು ತೋಟದಿಂದ ಕೊಯ್ದ 6 ಕ್ವಿಂಟಲ್ ಅಡಿಕೆಗಳನ್ನು ಒಣಗಿಸಲು ಮನೆಯ ಅಂಗಳದಲ್ಲಿ ಹಾಕಿದ್ದು ಇದರಲ್ಲಿ ಡಿ.25ರಿಂದ ಡಿ.26ರ ಮಧ್ಯಾವಧಿಯಲ್ಲಿ ಸುಮಾರು 60,000ರೂ. ಮೌಲ್ಯದ 3 ಕ್ವಿಂಟಲ್ ಅಡಿಕೆ ಕಳವಾಗಿರುವುದು ಕಂಡುಬಂದಿದೆ. ಇದನ್ನು ಕುಡಿತ ಚಟ ಹೊಂದಿರುವ ಕುತ್ಯಾರು ಗ್ರಾಮದ ಚೇತನ್ ಎಂಬಾತ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.