ಬಂಟಕಲ್ಲು : ಸಾರ್ವಜನಿಕ ವಾಹನ ಪೂಜೆ – ನೂರಕ್ಕೂ ಮಿಕ್ಕಿದ ವಾಹನಗಳಿಗೆ ಪೂಜೆ

ಬಂಟಕಲ್ಲು: ರಾಜಾಪುರ ಸಾರಸ್ವತ ಯುವ ವೃಂದದ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 7 ನೇ ವರ್ಷದ ಸಾಮೂಹಿಕ ವಾಹನ ಪೂಜೆಯು ಬಂಟಕಲ್ಲು ದೇವಸ್ಥಾನದ ವಠಾರದಲ್ಲಿ ಇಂದು ಜರುಗಿತು. ರಾ ಸಾ ಯುವ ವೃಂದದ ಗೌರವಾಧ್ಯಕ್ಷ ಶ್ರೀ ಕೆ ಆರ್ ಪಾಟ್ಕರ್ ರವರು ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಶಿರ್ವ ಯುವ ಉದ್ಯಮಿ, ಲೊಕೋಪಯೋಗಿ ಗುತ್ತಿಗೆದಾರರಾದ ರಾಜೇಶ್ ನಾಯ್ಕ್ ರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ದೇವಸ್ಥಾನದ ಆಡಳಿತೆ ಮೊಕ್ತೇಸರರಾದ ಶ್ರೀ ಶಶಿಧರ ವಾಗ್ಲೆಯವರು ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಸಾರಿಗೆ ನಿಯಮಗಳನ್ನು ಪಾಲಿಸಿಕೊಂಡು ವಾಹನಗಳನ್ನು ಚಾಲಾಯಿಸಬೇಕು, ನಾವು ಬಳಸುವ ವಾಹನಗಳಲ್ಲಿಯೂ ದೈವ್ವತ್ವ ಕಾಣಬೇಕು ಮತ್ತು ಅದಕ್ಕಾಗಿ ವಾಹನಗಳನ್ನು ಪೂಜಿಸಬೇಕು ಎಂದು ಹೇಳಿ ಶುಭಹಾರೈಸಿದರು. ದೇವಸ್ಥಾನದ ಅರ್ಚಕರಾದ ಶ್ರೀ ಶ್ರೀಕಾಂತ್ ಭಟ್ ರವರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.

ಆಡಳಿತ ಮಂಡಳಿ ಅಧ್ಯಕ್ಷ ಜಯರಾಮ ಪ್ರಭು ಸೂಡ, ಉಪಾಧ್ಯಕ್ಷ ಶ್ರೀ ಉಮೇಶ ಪ್ರಭು, ನಿವೃತ್ತ ಶಿಕ್ಷಕರೂ ಪತ್ರಕರ್ತರಾದ ಶ್ರೀ ಪುಂಡಲೀಕ ಮರಾಠೆ, ಶಿರ್ವ ರೋಟರಿ ಅಧ್ಯಕ್ಷ ರೊ. ವಿಠಲ ನಾಯಕ್, ಶಿಕ್ಷಕ ದೇವದಾಸ ಪಾಟ್ಕರ್, ನಿವೃತ್ತ ಯೋಧರಾದ ರಾಜೇಂದ್ರ ಪಾಟ್ಕರ್, ಶ್ರೀ ಗೋಪಾಲ ಶೆಟ್ಟಿ, ಶ್ರೀ ಶಿವಣ್ಣ, ಶ್ರೀ ಗೋವಿಂದ ಕುಂದರ್ ಶಿರ್ವ, ವಿರೇಂದ್ರ ಪಾಟ್ಕರ್ ಯುವ ವೃಂದದ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು.

ನೂರಕ್ಕೂ ಮಿಕ್ಕಿದ ವಿವಿಧ ವಾಹನಗಳು ಪೂಜಿಸಲ್ಪಟ್ಟವು. ಕಾರ್ಯಕ್ರಮದ ಬಳಿಕ ಎಲ್ಲರಿಗೂ ಉಪಹಾರದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ರಾ.ಸಾ ಯುವ ವೃಂದದ ಅಧ್ಯಕ್ಷ ಶ್ರೀ ರಾಘವೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ್ದರು, ಕಾರ್ಯದರ್ಶಿ ಶ್ರೀ ಅನಂತರಾಮ ವಾಗ್ಲೆ ಎಲ್ಲರಿಗೂ ಧನ್ಯವಾದ ತಿಳಿಸಿದರು.

You cannot copy content from Baravanige News

Scroll to Top