(ಇಂದು ನ. 4) ಶಿರ್ವ ಪೋಲೀಸ್ ಠಾಣೆ ವತಿಯಿಂದ ಕಾನೂನು ಮಾಹಿತಿ ಶಿಬಿರ : ಸಮಸ್ಯೆಗಳ ಗೊಂದಲಕ್ಕೆ ಪರಿಹಾರದ ಮಾಹಿತಿ

ಶಿರ್ವ : ಶಿರ್ವ ಪೋಲೀಸ್ ಠಾಣಾ ವತಿಯಿಂದ ಕಾನೂನು ಅರಿವು ಮಾಹಿತಿ ಕಾರ್ಯಾಗಾರ ನ. 4ರಂದು (ಇಂದು) ಸಂಜೆ 5 ಗಂಟೆಗೆ ಸರಿಯಾಗಿ ಶಿರ್ವ ಮಹಿಳಾ ಸೌಧ ಸಭಾಂಗಣದಲ್ಲಿ ನಡೆಯಲಿದೆ.

ಸಾರ್ವಜನಿಕರಿಗೆ ಕಾನೂನು ವಿಚಾರವಾದ ಸಂಪೂರ್ಣ ಮಾಹಿತಿಯನ್ನು ಒದಗಿಸುವ ಕಾರ್ಯಕ್ರಮದಲ್ಲಿ ಉಡುಪಿ ನ್ಯಾಯಾಲಯದ ನ್ಯಾಯಾಧೀಶ ವಿನಾಯಕ ವಾನಕಂಡೆ ಹಾಗೂ ನುರಿತ ವಕೀಲರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾಹಿತಿ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೀಟ್ ವ್ಯಾಪ್ತಿಯ ಬೀಟ್ ಸದಸ್ಯರು, ಯೂತ್ ಕಮಿಟಿ ಸದಸ್ಯರು, ಪ್ರಕರಣಗಳಲ್ಲಿ ನೊಂದವರು, ಪಾಸ್ ಪೋರ್ಟ್ ಅರ್ಜಿದಾರರು, ಆಟೋ ಚಾಲಕರು, ಮಾಲಿಕರು ಹಾಗೂ ಸಾರ್ವಜನಿಕರಿಗಾಗಿಯೇ ಹಲವು ಕಾನೂನು ಆಧಾರಿತ ಮಾಹಿತಿಗಳನ್ನು ನೀಡುವ ಉದ್ದೇಶದಿಂದ ಮಾಡಿರುವ ಮಾಹಿತಿ ಕಾರ್ಯಾಗಾರದಲ್ಲಿ ಎಲ್ಲರೂ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂಬುದು ಶಿರ್ವ ಪೋಲೀಸ್ ಠಾಣೆಯ ಕಳಕಳಿಯಾಗಿದೆ.

You cannot copy content from Baravanige News

Scroll to Top