ಪಿಲಾರು : ದೈವ ದೇವರ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಹಾಸ ಶೆಟ್ಟಿ ಅಸೌಖ್ಯದಿಂದ ನಿಧನ

ಪಿಲಾರು: ಉಡುಪಿ ಜಿಲ್ಲೆ ಕಾಪು ತಾಲೂಕು ಪಿಲಾರು ಗ್ರಾಮದ ಪರಾರಿ ಶ್ರೀ ಚಂದ್ರಹಾಸ ಶೆಟ್ಟಿ ನ.18ರಂದು ನಿಧನರಾಗಿದ್ದಾರೆ.

ಅಲ್ಪಕಾಲರ ಅಸೌಖ್ಯದಿಂದ ಬಳಲುತ್ತಿದ್ದ ಚಂದ್ರಹಾಸ್ ಶೆಟ್ಟಿ (71 ವ) ಮುಂಜಾನೆ 12.30 ಕ್ಕೆ ಉಡುಪಿಯ ಸ್ವಗೃಹದಲ್ಲಿ ದೈವಾಧೀನರಾಗಿರುತ್ತಾರೆ. ವಿಜಯ ಬ್ಯಾಂಕಿನಲ್ಲಿ ಉದ್ಯೋಗಿಯಾಗಿ ನಿವೃತ್ತರಾದ ಇವರು ಪಿಲಾರು ತಂಬಿದಬೆಟ್ಟು ಶ್ರೀ ಧರ್ಮಜಾರಾಂದಾಯ ದೇವಸ್ಥಾನ, ಪಿಲಾರು ಪರಾರಿ ಕೊಡಮಣಿತ್ತಾಯ ದೈವಸ್ಥಾನ , ಅಲ್ಲದೆ ಊರ ಹತ್ತು ಸಮಸ್ತರು ಆರಾಧಿಸಿಕೊಂಡು ಬಂದಿರುವ ದೈವ ದೇವರ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಇವರ ಧರ್ಮಪತ್ನಿ ನಿವೃತ್ತ ವಿಜಯ ಬ್ಯಾಂಕ್ ಉದ್ಯೋಗಿ ಕುತ್ಯಾರು ಕೇಂಜ ಅಬ್ಬೆಟ್ಟುಗುತ್ತು ಶ್ರೀಮತಿ ಆಶಾ, ಓರ್ವ ಪುತ್ರ ಓರ್ವ ಪುತ್ರಿ ಕುಟುಂಬಿಕರು ಪಿಲಾರು ಸಾಂತೂರು ಉಭಯ ಗ್ರಾಮಸ್ಥರನ್ನು ಅಗಲಿದ್ದಾರೆ.

You cannot copy content from Baravanige News

Scroll to Top