ನ. 29: ಸೂಡ ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ

ಶಿರ್ವ, ನ. 24: ಸೂಡ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಷಷ್ಠಿ ಮಹೋತ್ಸವವು ನ. 29ರಂದು ಉಡುಪಿ ಪುತ್ತೂರು ವೇ. ಮೂ. ಹಯವದನ ತಂತ್ರಿ ಅವರ ನೇತೃತ್ವದಲ್ಲಿ ಅರ್ಚಕ ವೇಮೂ ಸುಬ್ರಹ್ಮಣ್ಯ ಭಟ್ಟರ ಪೌರೋಹಿತ್ಯದಲ್ಲಿ ನಡೆಯಲಿದೆ. ಡಿ. 2ರಂದು ಶ್ರೀಸುಬ್ರಹ್ಮಣ್ಯ ದೇವರ ಮಹಾ ರಥೋತ್ಸವ ಜರಗಲಿದೆ.

ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನ. 23ರಂದು ಆರಂಭಗೊಂಡಿದ್ದು, ನ. 28ರಂದು ಧ್ವಜಾರೋಹಣ, ಬಲಿ, ಮಹಾಪೂಜೆ, ನ. 29ರಂದು ಪಂಚಾಮೃತಾಭಿಷೇಕ, ಕಲಶಾಭಿಷೇಕ, ಬಲಿ, ಮಹಾಪೂಜೆ, ಷಷ್ಠಿ ಮಹೋತ್ಸವ, ರಥೋತ್ಸವ, ಮಹಾ ಅನ್ನಸಂತರ್ಪಣೆ, ರಾತ್ರಿ ರಥೋತ್ಸವ, ಭೂತ ಬಲಿ, ಡಿ. 1ರಂದು ಆಶ್ಲೇಷಾ ಬಲಿ, ಕಟ್ಟೆಪೂಜೆ, ಭೂತಬಲಿ, ಡಿ, 2 ರಂದು ಮಹಾಪೂಜೆ, ರಥಾರೋಹಣ, ರಾತ್ರಿ ಮಹಾ ರಥೋತ್ಸವ, ಡಿ. 3ರಂದು ತುಲಾಭಾರ, ನಾಗದರ್ಶನ, ರಾತ್ರಿ ಜುಮಾದಿ ದೈವದ ನೇಮ ಇತ್ಯಾದಿ ಜರಗಲಿದೆ ಎಂದು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತಸರ ಶಿರ್ವ ಕೋಡು ಜಯಶೀಲ ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದೆ.

ಧಾರ್ಮಿಕ ಹಿನ್ನೆಲೆ

ಮುನಿವರೇಣ್ಯ ಭಾರ್ಗವ ಮಹರ್ಷಿಗಳು ಪ್ರತಿಷ್ಠಾಪಿಸಿದ ಶ್ರೀ ವಾಸುಕೀ ಸುಬ್ರಹ್ಮಣ್ಯನ ಚೂಡ ಕ್ಷೇತ್ರವು ಕಲಿಯುಗದಲ್ಲಿ ಸೂಡವೆಂದೇ ಹೆಸರಾಗಿ ತುಳುನಾಡಿನಲ್ಲಿ ಷಷ್ಠಿ ಉತ್ಸವಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಶ್ರೀ ವಾಸುಕೀ ಸುಬ್ರಹ್ಮಣ್ಯನೊಂದಿಗೆ ಕ್ಷೇತ್ರ ರಕ್ಷಕರಾಗಿ ಪರಿವಾರ ನಾಗ ಮತ್ತು ಪಂಚದೈವ ಶಕ್ತಿಗಳು ನೆಲೆಯಾಗಿವೆ.

Scroll to Top