ಮಂಗಳೂರು, ಡಿ 05: ಲಾರಿಗಳ ನಡುವೆ ನಡೆದ ಭೀಕರ ಅಪಘಾತವೊಂದರಲ್ಲಿ ಇಬ್ಬರು ದುರಂತ ಸಾವನ್ನಪ್ಪಿದ ಘಟನೆ ನಗರ ಹೊರವಲಯದ ಗುರುಪುರದಲ್ಲಿ ನಡೆದಿದೆ.
ವಾಮಂಜೂರಿನಿಂದ ಗುರುಪುರ ಕಡೆ ತೆರಳುತ್ತಿದ್ದ ಲಾರಿ ಕೈಕಂಬ ಕಡೆಯಿಂದ ಬರುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದಿದೆ. ಬ್ರೇಕ್ ಫೈಲ್ ಆಗಿ ಇಳಿಜಾರು ಪ್ರದೇಶವಾದ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ಬಾರದೆ ಲಾರಿ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ. ಲಾರಿ ಸವಾವರಿಬ್ಬರ ದಾರುಣ ಸಾವನ್ನಪ್ಪಿದ್ದಾರೆ.
ಮುಂಜಾನೆ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದು, ಈ ಭಾಗದಲ್ಲಿ ಈ ಹಿಂದೆ ಇದೇ ರೀತಿ ಆರಕ್ಕೂ ಅಧಿಕ ಘಟನೆ ನಡೆದಿವೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.