ಕುತ್ಯಾರು: ರಸ್ತೆ ಬದಿಯಲ್ಲಿ ಕಸಗಳ ರಾಶಿ; ಶೀಘ್ರ ಕ್ರಮಕ್ಕೆ ಸ್ಥಳೀಯರ ಆಗ್ರಹ

ಕುತ್ಯಾರು: ಕಸಗಳನ್ನು ರಸ್ತೆ ಬದಿಗಳಲ್ಲಿ ರಾಶಿ ಹಾಕಿರುವ ಘಟನೆ ಕುತ್ಯಾರಿನಲ್ಲಿ ನಡೆದಿದೆ.

ಕುತ್ಯಾರಿನ ರಸ್ತೆ ಬದಿಗಳಲ್ಲಿ ಕಸಗಳನ್ನು ತಂದು ರಾಶಿ ಹಾಕಲಾಗುತ್ತಿದ್ದು, ರಸ್ತೆ ಬದಿಯಲ್ಲೆಲ್ಲಾ ಪ್ಲಾಸ್ಟಿಕ್ ಕವರ್ ಗಳಲ್ಲಿ ಕಸಗಳನ್ನು ತಂದು ಸುರಿಯಲಾಗುತ್ತಿದೆ.

ಕಸ ರಾಶಿ ಹಾಕಿ ಪರಿಸರದ ಸ್ವಾಸ್ಥ್ಯವನ್ನು ಹಾಳುಗೆಡವಲಾಗುತ್ತಿದೆ. ಈ ಪರಿಸರದಲ್ಲಿ ರಾತ್ರಿ ವೇಳೆ ಕಿಡಿಗೇಡಿಗಳು ಕಸ ತಂದು ಎಸೆಯುತ್ತಿದ್ದಾರೆ. ಗ್ರಾಮ ಪಂಚಾಯತ್ ನವರು ಈ ಬಗ್ಗೆ ಗಮನ ಹರಿಸಬೇಕು. ಶೀಘ್ರ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

You cannot copy content from Baravanige News

Scroll to Top