ಅಪರೂಪದ ವಿದ್ಯಾಮಾನ; ಆಗಸದಲ್ಲಿ ಕಾಣಿಸಲಿದೆ ಗುರು-ಶುಕ್ರ ಗ್ರಹಗಳ ಜೋಡಿ

ಉಡುಪಿ: ಕಣ್ಣಿಗೆ ಕಾಣುವ ಅತಿ ಸುಂದರ ಗ್ರಹಗಳಾದ ಗುರು ಹಾಗೂ ಶುಕ್ರ ರ ಜೋಡಾಟ ಆಕಾಶದಲ್ಲಿ ಈಗ ನಡೆಯುತ್ತಿದ್ದು ಮಾ.1 ಮತ್ತು 2ರಂದು ಸಂಜೆ ಪಶ್ಚಿಮ ಆಕಾಶದಲ್ಲಿ ಗುರು ಶುಕ್ರರ ಜೋಡಿ, ಬಲು ಸುಂದರವಾಗಿ ಕಾಣಿಸಲಿದೆ.

ಈಗ ಕೆಲ ದಿನ ಸಂಜೆಯ ಪಶ್ಚಿಮ ಆಕಾಶದಲ್ಲಿ ಗುರು ಶುಕ್ರರ ಜೋಡಿ, ಬಲು ಸುಂದರವಾಗಿ ಕಾಣುತ್ತಿದೆ . ಪಶ್ಚಿಮ ಆಕಾಶದಲ್ಲಿ ಸಂಜೆಯಾಗುತ್ತಿದ್ದಂತೆ ಸರ್ಯಾಸ್ತಕ್ಕೆ ಹಿಡಿದ ಅವಳಿ ದೀವಟಿಕೆಯೋ ಎನ್ನುವಂತೆ ಅಕ್ಕಪಕ್ಕದಲ್ಲಿ ಹೊಳೆಯುತ್ತಿವೆ. ಮಾರ್ಚ್ 1 ರಂದು ಗುರು ಗ್ರಹ ಶುಕ್ರ ಗ್ರಹದ ಅರ್ಧ ಡಿಗ್ರಿ ಸಮೀಪ ಕಾಣಿಸಲಿದೆ.

ಶುಕ್ರ, ಭೂಮಿಯಿಂದ ಈಗ ಸುಮಾರು 20.5 ಕೋಟಿ ಕಿಮೀ ದೂರದಲ್ಲಿದ್ದರೆ. ಗುರುಗ್ರಹವಿಗ ಭೂಮಿಯಿಂದ 86 ಕೋಟಿ ಕಿಮೀ ದೂರದಲ್ಲಿದೆ. ಗುರುಗ್ರಹದ ಗಾತ್ರ ಶುಕ್ರನಿಗಿಂತ ಸುಮಾರು 1400 ದೊಡ್ಡದು. ಆದರೂ ಶುಕ್ರ ಫಳಫಳ ಹೊಳೆಯುತ್ತಿದೆ.

ಶುಕ್ರ ಹೊಳೆಯಲು ಆ ಗ್ರಹದ ವಾತಾವರಣವೇ ಕಾರಣ. ಸ್ವಯಂ ಪ್ರಭೆ ಇಲ್ಲದ ಈ ಗ್ರಹದ ವಾತಾವರಣದಲ್ಲಿರುವ ಕಾರ್ಬನ್ ನ ಅಕ್ಸೈಡುಗಳು ಹಾಗೂ ಸಲ್ಫರ್ ಡೈಆಕ್ಸೈಡ್ನ ತೆಳು ಕವಚ ಸುಮಾರು 80 ಅಂಶ ಸೂರ್ಯನ ಬೆಳಕನ್ನು ಪ್ರತಿಫಲಿಸುವುದೇ ಕಾರಣ.

ಶುಕ್ರ ಆಗಸ್ಟ್ ವರೆಗೂ ಸಂಜೆ ಆಕಾಶದಲ್ಲಿ ಬೇರೆ ಬೇರೆ ಎತ್ತರದಲ್ಲಿ ಹೊಳೆಯಲಿದೆ. ಆದರೆ ಗುರು ಗ್ರಹ ಕೆಲವೇ ದಿನಗಳಲ್ಲಿ ಮರೆಯಾಗಲಿದೆ. ಸಂಜೆಯ ಸೂರ್ಯಾಸ್ತ ಹಾಗೂ ಸೂರ್ಯೋದಯ ಕೆಂಬಣ್ಣದ ಬಣ್ಣ ಈಗ ಅತಿ ಸುಂದರವಾಗಿ ಕಾಣಲಿದೆ ಎಂದು ಭೌತಶಾಸ್ತ್ರಜ್ಞ ಡಾಕ್ಟರ್ ಎಪಿ ಭಟ್ ತಿಳಿಸಿದ್ದಾರೆ.

You cannot copy content from Baravanige News

Scroll to Top