ವಾಟ್ಸಾಪ್​ನಿಂದ ಹೊಸ ಫೀಚರ್; ‘ಸ್ಟೇಟಸ್ ರಿಪೋರ್ಟ್’

ನವದೆಹಲಿ: ವಾಟ್ಸಾಪ್ ನ ಮಾತೃ ಸಂಸ್ಥೆ ಮೆಟಾ ಮತ್ತೊಂದು ಹೊಸ ಫೀಚರ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್‌ಆ್ಯ‍ಪ್ ಬಳಕೆದಾರರಿಗೆ ಹೊಸ ವೈಶಿಷ್ಟ್ಯ ಪರಿಚಯಿಸುತ್ತಿದೆ.

ಆ್ಯಂಡ್ರಾಯ್ಡ್‌ನಲ್ಲಿ ಈ ಹೊಸ ಫೀಚರ್ ಲಭ್ಯವಾಗಲಿದ್ದು ವಾಟ್ಸ್‌ಆ್ಯಪ್ ಸ್ಟೇಟಸ್ ನಲ್ಲಿ ‘ರಿಪೋರ್ಟ್’ ಆಯ್ಕೆಯನ್ನು ವಾಟ್ಸ್‌ಆ್ಯಪ್ ಪರೀಕ್ಷೆ ನಡೆಸುತ್ತಿದೆ.

ಬಳಕೆದಾರರು ಹಾಕಿರುವಂತಹ ವಾಟ್ಸ್‌ಆ್ಯಪ್ ಸ್ಟೇಟಸ್, ಸಂಸ್ಥೆಯ ಸೇವೆಯ ನಿಯಮಗಳ ಉಲ್ಲಂಘನೆ ಮಾಡುವಂತಿದ್ದರೆ ಈ ಹೊಸ ಫೀಚರ್ ಬಳಸಿ ರಿಪೋರ್ಟ್ ಮಾಡಬಹುದು.

ರಿಪೋರ್ಟ್ ಮಾಡಿದ ತಕ್ಷಣ ಈ ಸಂದೇಶ ಸ್ಟೇಟಸ್ ಮಾಡರೇಶನ್ ತಂಡಕ್ಕೆ ರವಾನೆಯಾಗುತ್ತದೆ. ಇದು ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಮೂಲಕ ಭದ್ರತೆಯನ್ನು ಖಚಿತಪಡಿಸುತ್ತದೆ. ಅಂದರೆ, ವಾಟ್ಸ್‌ಆ್ಯ‍ಪ್ ಸಂಸ್ಥೆ, ಮೆಟಾ ಮತ್ತು ಪ್ರಾಕ್ಸಿ ಪ್ರೊವೈಡರ್ ಸೇರಿದಂತೆ ಯಾರೊಬ್ಬರೂ ಸಹ ವೈಯಕ್ತಿಕ ಸಂದೇಶಗಳನ್ನು ಓದಲು ಮತ್ತು ಅವರ ಖಾಸಗಿ ಕರೆಗಳನ್ನು ಕೇಳಲು ಸಾಧ್ಯವಿಲ್ಲ

ಹೊಸ ಸ್ಟೇಟಸ್ ಅಪ್‌ಡೇಟ್ ರಿಪೋರ್ಟಿಂಗ್ ವೈಶಿಷ್ಟ್ಯವು ವಾಟ್ಸ್‌ಆ್ಯ‍ಪ್ ಕಮ್ಯೂನಿಟಿಯ ಭದ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Scroll to Top