ಕುರ್ಕಾಲು ಯುವಕ ಮಂಡಲ (ರಿ.) ಕುರ್ಕಾಲು ಮತ್ತು ಗ್ರಾಮ ಪಂಚಾಯತ್ ಕುರ್ಕಾಲು ಇವರ ಜಂಟಿ ಆಶ್ರಯದಲ್ಲಿ ಹಾಗೂ ಲಯನ್ಸ್ ಸುಭಾಸ್ ನಗರ ಇದರ ಸಹ ಭಾಗಿತ್ವದಲ್ಲಿ ಇಂದು ಕುರ್ಕಾಲು ಹಾಗೂ ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಜ್ಯ ಹೆದ್ದಾರಿಯಲ್ಲಿ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಯುವಕ ಮಂಡಲದ ಗೌರವಧ್ಯಕ್ಷರು ದಿನಕರ್ ಶೆಟ್ಟಿ, ಕುರ್ಕಾಲು ಯುವಕ ಮಂಡಲದ ಗೌರವ ಸಲಹೆಗಾರರು ರಘುರಾಮ್ ಕೋಟ್ಯಾನ್,ಗ್ರಾಮ ಪಂಚಾಯತ್ ಅಧ್ಯಕ್ಷರು ಮಹೇಶ್ ಶೆಟ್ಟಿ, ಮಾಜಿ ಅಧ್ಯಕ್ಷರು ಭುವನೇಶ್ ಎಲ್ ಪೂಜಾರಿ, ವಿಜಯ್ ಶೆಟ್ಟಿ ನೂಜಿ, ಕುರ್ಕಾಲು ಗ್ರಾಮದ ಮ್ಯಾಕ್ಸಿಮ್ ಆಲ್ವಾ, ರೋನಾಲ್ಡ್ ಸೋನ್ಸ್, ಲಯನ್ ಸುರೇಶ್ ಸುವರ್ಣ ಕುರ್ಕಾಲು , ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯರು ಸುಭಾಷ್ ಬಲ್ಲಾಳ್, ಕುರ್ಕಾಲು ಯುವಕ ಮಂಡಲದ ಎಲ್ಲಾ ಪಧಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.