ಬ್ರಹ್ಮಾವರ: ಜ್ವರದಿಂದ ಬಳಲುತ್ತಿದ್ದ ಮಗುವಿಗೆ ವಾರದ ಹಿಂದೆ ತಂದಿಟ್ಟಿದ್ದ ಹಾಲಿನೊಂದಿಗೆ ಸಿರಪ್ ಮಾತ್ರೆ ಸೇವಿಸಿದ ಎರಡೂವರೆ ವರ್ಷದ ಮಗು ಮೃತಪಟ್ಟ ಘಟನೆ ವರದಿಯಾಗಿದೆ.
ಬ್ರಹ್ಮಾವರ ತಾಲೂಕು ಆರೂರು ಗ್ರಾಮದ ಹೆಬ್ಬಾರು ಬೆಟ್ಟು ಎಂಬಲ್ಲಿ ಸಕಲೇಶಪುರದ ಎನ್.ಆರ್ ವಿವೇಕ್ ಎಂಬವರಿಗೆ ಸಂಬಂಧಿಸಿದ ಕೃಷಿ ಫಾರ್ಮ್ ನ ಬಿಡಾರದಲ್ಲಿ ವಾಸಮಾಡಿಕೊಂಡಿರುವ ರಾಜ್ ಕುಮಾರ್ ಎಂಬವರ ಎರಡೂವರೆ ವರ್ಷದ ಮಗು ಮೃತಪಟ್ಟಿದೆ. ಇವರು ಮೂಲತಃ ಬಿಹಾರದವರೆಂದು ತಿಳಿದುಬಂದಿದೆ.
ರಾಜ್ ಕುಮಾರ್ ಅವರ ಮಗಳಿಗೆ ಜ್ವರ, ಹೊಟ್ಟೆನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಆಸ್ಪತ್ರೆಯ ವೈದ್ಯರ ಬಳಿ ಹೋದಾಗ ವೈದ್ಯರು ಸಿರಪ್ ನೀಡಿದ್ದರು. ಅಲ್ಲದೇ ಅವಳಿಗೆ 10 ದಿನಗಳ ಹಿಂದೆ ಹುಷಾರಿಲ್ಲದೇ ಇದ್ದಾಗ ನೀಡಿದ ಉಳಿದ ½ ಮಾತ್ರೆ ತೆಗೆದುಕೊಳ್ಳುವಂತೆ ಸೂಚಿಸಿದ್ದರು.
ನಂತ್ರ ಬಿಡಾರಕ್ಕೆ ಬಂದು ಅವಳಿಗೆ 1 ವಾರದ ಹಿಂದೆ ಮನೆಯಲ್ಲಿ ತಂದಿಟ್ಟಿದ್ದ ಹಾಲನ್ನು ಬಿಸಿ ಮಾಡಿ ಆರಿಸಿ ಸ್ವಲ್ಪ ನೀಡಿ, ಬಳಿಕ 5 ಎಮ್ಎಲ್ ಸಿರಪನ್ನು ನೀಡಿ, ನಂತ್ರ ½ ಮಾತ್ರೆಯನ್ನು ಪುಡಿ ಮಾಡಿ ಸ್ವಲ್ಪ ಹಾಲನ್ನು ಹಾಕಿ ಕುಡಿಸಿ ಮಲಗಿಸಿದ್ದರು. ಬಳಿಕ ಮಧ್ಯಾಹ್ನ 3:00 ಗಂಟೆಯ ಸಮಯಕ್ಕೆ ಮಗು ತೀರಾ ಅಸ್ವಸ್ಥಗೊಂಡಿದ್ದು, ಅವಳನ್ನು ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಲ್ಲಿ ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿದೆ ಎಂದು ದೃಢಪಡಿಸಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.