ಬೈಂದೂರು: ಕಾರಿನಲ್ಲಿ ಸಾಗಿಸುತ್ತಿದ್ದ 20 ಲಕ್ಷ ರೂ. ಜಪ್ತಿ..!!

ಬೈಂದೂರು (ಮಾ.17) : ಸೂಕ್ತ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 20 ಲಕ್ಷ ರೂ.ಗಳನ್ನು ಬೈಂದೂರು ಠಾಣೆಯ ಪೊಲೀಸರು ಜಪ್ತಿ ಮಾಡಿದ್ದಾರೆ.

ಉಡುಪಿ ಜಿಲ್ಲೆಯ ಗಡಿಭಾಗದ ಶಿರೂರು ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಎಸ್‌ಐ ನಿರಂಜನಗೌಡ ಮತ್ತು ಸಿಬ್ಬಂದಿ ಭಟ್ಕಳದಿಂದ ಬಂದ ನೋಂದಣಿ ನಂಬರ್ ಪ್ಲೇಟ್ ಇಲ್ಲದ ಕಾರನ್ನು ತಡೆದಿದ್ದಾರೆ. ಈ ವೇಳೆ ಕಾರನ್ನು ಪರಿಶೀಲಿಸಿದಾಗ ಹಿಂಬದಿ ಸೀಟಿನ ಕೆಳಗೆ ಪ್ಲಾಸ್ಟಿಕ್ ಬಂಡಲ್ ಇದ್ದು ಅದರಲ್ಲಿ ನಗದು ಕಂಡುಬಂದಿದೆ.

ಹಣದ ದಾಖಲೆ ಬಗ್ಗೆ ವಿಚಾರಣೆ ನಡೆಸಿದಾಗ ಚಾಲಕ ಯಾವುದೇ ದಾಖಲೆ ನೀಡಲು ವಿಫಲನಾಗಿದ್ದಾನೆ. ಪೊಲೀಸರು ಪರಿಶೀಲಿಸಿದಾಗ 100 ರೂಪಾಯಿ ಮುಖಬೆಲೆಯ 3000 ನೋಟುಗಳು, 200 ರೂಪಾಯಿ ಮುಖಬೆಲೆಯ 1000 ನೋಟುಗಳು ಮತ್ತು 500 ರೂಪಾಯಿ ಮುಖಬೆಲೆಯ 3000 ನೋಟುಗಳು ಪತ್ತೆಯಾಗಿವೆ. ಪತ್ತೆಯಾದ ಒಟ್ಟು ನಗದು 20 ಲಕ್ಷ ರೂ. ಪತ್ತೆಯಾಗಿದೆ.

ಕಾರು ಚಲಾಯಿಸುತ್ತಿದ್ದ ಬೆಳ್ತಂಗಡಿ ಶಿರ್ಲಾಲು ಮಂಜಿಲಪಲ್ಕೆ ನಿವಾಸಿ ಬಶೀರ್ (42) ಎಂಬಾತನನ್ನು ವಶಕ್ಕೆ ಪಡೆದಿದ್ದು,ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 43/2023 ಕಲಂ: 98 KP ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top