ಉಡುಪಿ: ಜಿಲ್ಲಾ ಪೋಲಿಸರಿಂದ ‘ಆಪರೇಶನ್ ಸನ್ ಸೆಟ್’ ವಿಶೇಷ ಕಾರ್ಯಾಚರಣೆ; 45 ಲೀಟರ್ ಅಕ್ರಮ ಮದ್ಯ ವಶ

ಉಡುಪಿ, ಮಾ 20: ಜಿಲ್ಲಾ ಪೊಲಿಸ್ ಇಲಾಖೆಯಿಂದ ವತಿಯಿಂದ ಆಪರೇಷನ್ ಸೂರ್ಯಾಸ್ತ ವಿಶೇಷ ಕಾರ್ಯಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಾರ್ಚ್ 18ರ ಸಂಜೆ 8 ಗಂಟೆಯಿಂದ 11:00 ಗಂಟೆಯವರೆಗೆ ಕಾರ್ಯಾಚರಣೆ ನಡೆಸಲಾಗಿದೆ.

ಈ ವಿಶೇಷ ಕಾರ್ಯಚರಣೆಯ ಅಂಗವಾಗಿ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯನ್ನೋಳಗೊಂಡ ವಿಶೇಷ ತಂಡಗಳನ್ನು ರಚಿಸಿ ಪ್ರಮುಖ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆದು, ವಾಹನಗಳನ್ನು ಕೂಲಂಕುಷವಾಗಿ ತಪಾಸಣೆ ಮಾಡಲಾಯಿತು. ಸಾರ್ವಜನಿಕರಿಗೆ ತೊಂದರೆ ನೀಡುವ ವ್ಯಕ್ತಿಗಳ ವಿರುದ್ದ ಕರ್ನಾಟಕ ಪೊಲೀಸ್ ಕಾಯ್ದೆ ಅನ್ವಯ ಪ್ರಕರಣಗಳನ್ನು ದಾಖಲಿಸಲಾಯಿತು. ನಿಷೇಧಿತ ಪ್ರದೇಶಗಳಲ್ಲಿ ತಂಬಾಕು ಹಾಗೂ ಅದರ ಉತ್ಪನ್ನಗಳನ್ನು ಮಾರಾಟ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲಾಯಿತು. ಅಲ್ಲದೇ ಅದರ ಜೊತೆಯಲ್ಲಿ ಇ-ಸಿಗರೇಟ್ ಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲು ಸಹ ದಾಳಿ ನಡೆಸಲಾಯಿತು. ಈ ವಿಶೇಷ ಕಾರ್ಯಚರಣೆಯಿಂದಾಗಿ ಗಾಂಜಾ ಹೊಂದಿದ 3 ಮಂದಿಯನ್ನು ಬಂಧಿಸಲಾಯಿತು. ಅಲ್ಲದೇ ವಾಹನ ತಪಾಸಣೆ ವೇಳೆ 45 ಲೀಟರ್ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಯಿತು.

ಫಿಂಗರ್ ಪ್ರಿಂಟ್ ಸ್ಕಾನರ್ಸ್ ಮುಖಾಂತರ ಹಳೆಯ ಕಳ್ಳತನ ಹಾಗೂ ಅದರ ಸಂಬಂಧಿತ ಪ್ರಕರಣಗಳಲ್ಲಿ ಭಾಗಿಯಾಗಿದ್ದ 60 ಮಂದಿ ಚಾಳಿಬಿದ್ದ ಆಸಾಮಿಗಳು ಆಪಾಧಿತರನ್ನು ಪರಿಶೀಲಿಸಿದ್ದಾರೆ. ಸರಿಯಾಗಿ ದಾಖಲೆಗಳಿಲ್ಲದ, ನಕಲಿ ನಂಬರ್ ಪ್ಲೇಟ್, ನಂಬರ್ ಪ್ಲೇಟ್ ಇಲ್ಲದ, ಮದ್ಯಪಾನ ಸೇವಿಸಿ ವಾಹನ ಚಾಲನೆ ಮಾಡುತ್ತಿರುವ ವಾಹನ ಚಾಲಕರುಗಳನ್ನು ತಪಾಸಣೆ ಮಾಡಲಾಯಿತು. ಈ ಸಮಯ ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡಿದ ಬಗ್ಗೆ 32 ಪ್ರಕರಣಗಳನ್ನು ದಾಖಲಿಸಲಾಯಿತು. ಅಲ್ಲದೇ ಕ್ರಮ ಬಧ್ಧವಾದ ನಂಬರ್ ಪ್ಲೇಟ್ ಹೊಂದಿರದ/ನಕಲಿ ನಂಬರ್ ಪೇಟ್ ಹೊಂದಿರುವಂತಹ 29 ವಾಹನಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಯಿತು. ಒಟ್ಟು 258 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿಕೊಂಡು 1,30,000 ರೂ. ದಂಡದ ಮೊತ್ತವನ್ನು ಸಂಗ್ರಹಿಸಲಾಯಿತು. ಅದೇ ರೀತಿ 44 ನಿಷೇಧಿತ ಪ್ರದೇಶಗಳಲ್ಲಿ ತಂಬಾಕು ಹಾಗೂ ಅದಕ್ಕೆ ಸಂಬಂಧಪಟ್ಟ ಉತ್ಪನ್ನಗಳನ್ನು ಮಾರಾಟ ಮಾಡಿದ ಬಗ್ಗೆ 44 ಕೋಟ್ಪಾ ಕಾಯ್ದೆ ಅಡಿ ಪ್ರಕರಣಗಳನ್ನು ದಾಖಲಿಸಲಾಯಿತು. ಅದೇ ರೀತಿ ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯಪಾನ ಮಾಡುತ್ತಿದ್ದ 17 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಯಿತು.

ನಾವು ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ 65 ಮಂದಿ ರೌಡಿ ಶೀಟರ್ಗಳನ್ನು ಅನಿರೀಕ್ಷಿತವಾಗಿ ತಪಾಸಣೆ ನಡೆಸಿ ಅವರ ಕಾರ್ಯಚಟುವಟಿಕೆಗಳ ಬಗ್ಗೆ ನಿಗಾವಹಿಸಲಾಯಿತು. ಉಡುಪಿ ಜಿಲ್ಲೆಯ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಆತ್ಮ ವಿಶ್ವಾಸ ನಿರ್ಮಾಣ ಮಾಡವರೇ ಇಂತಹ ಸಮಾಜ ವಿರೋಧಿ ಚಟುವಟಿಕೆಗಳನ್ನು ನಡೆಸುವವರ ಬಗ್ಗೆ ತೀರ್ವ ನಿಗಾ ವಹಿಸಿ ಕಾನೂನಿನ ಪರಿಪಾಲನೆ ಮಾಡುವ ಸಲುವಾಗಿ ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಈ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು.

You cannot copy content from Baravanige News

Scroll to Top