ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ ಎತ್ತಿದ ವ್ಯಕ್ತಿಯ ಸ್ಕೂಟರ್‌ಗೆ ಹಾನಿ; ಪ್ರಕರಣ ದಾಖಲು

ಉಡುಪಿ (ಮಾರ್ಚ್ 20) : ಉದ್ಯಾವರ ಮಠದಕುದ್ರು, ಬೊಳ್ಜೆ ಪರಿಸರದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯ ವಿರುದ್ಧ ಅದಮಾರು ಮಠದ ಸ್ವಾಮೀಜಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಸ್ಥಳೀಯ ನಿವಾಸಿ ಭಾಸ್ಕರ್ ಕರ್ಕೇರಾ ಎಂಬವರ ಸ್ಕೂಟರ್‌ರನ್ನು ದುಷ್ಕರ್ಮಿಗಳು ಹಾನಿಗೈದ ಬಗ್ಗೆ ವರದಿಯಾಗಿದೆ.

ಅದಮಾರು ಸ್ವಾಮೀಜಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಬುಧವಾರ ಬೆಳಗ್ಗೆ ಸುದ್ದಿಗೋಷ್ಠಿ ಕರೆದು ಅಕ್ರಮ ಮರಳು ಮಾಫಿಯದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.

ಈ ಸಂದರ್ಭದಲ್ಲಿ ಹಾಜರಿದ್ದ ಭಾಸ್ಕರ್ ಕರ್ಕೇರ ತಮ್ಮ ಮನೆಯ ಸಮೀಪ ನಿಲ್ಲಿಸಿದ್ದ ಸ್ಕೂಟರನ್ನು ದುಷ್ಕರ್ಮಿಗಳು ಅದೇ ದಿನ ರಾತ್ರಿ ಹಾನಿಗೊಳಿಸಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

You cannot copy content from Baravanige News

Scroll to Top