ಯುಗಾದಿ ಹಬ್ಬ – ಹಲಾಲ್ ಕಟ್ ಬಹಿಷ್ಕಾರಕ್ಕೆ ಮುತಾಲಿಕ್ ಕರೆ…!!!

ಮಂಗಳೂರು (ಮಾರ್ಚ್ 20) : ರಾಜ್ಯದಲ್ಲಿ ಮತ್ತೆ ಹಲಾಲ್ ವಿವಾದ ಭುಗಿಲೇಳುವ ಸಾಧ್ಯತೆ ಇದ್ದು, ಕಳೆದ ಬಾರಿಯಂತೆ ಈ ಬಾರಿಯೂ ಯುಗಾದಿ ಸಂದರ್ಭ ಹಲಾಲ್ ಕಟ್ ಬಹಿಷ್ಕಾರ ಅಭಿಯಾನ ಮುಂದುವರೆಯಲಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲಾಲ್ ಕಟ್ ಬಹಿಷ್ಕರಿಸಿ ಜಟ್ಕಾ ಕಟ್ ಸ್ವೀಕರಿಸಿ ಎಂದು ಕಳೆದ ವರ್ಷ ಆರಂಭಿಸಿದ ಅಭಿಯಾನ ಯಶಸ್ವಿಯಾಗಿತ್ತು. ಬೆಂಗಳೂರು, ಕೋಲಾರ ಭಾಗದಲ್ಲಿ ಯುಗಾದಿ ಮರುದಿನ ಮಾಂಸದ ಊಟವನ್ನು ಎಲ್ಲರೂ ಸೇರಿ ಹಬ್ಬದ ವಾತಾವರಣದಂತೆ ಮಾಡುತ್ತಾರೆ.

ಹೀಗಾಗಿ ಈ ಬಾರಿ ನಾವು ಮತ್ತೆ ಕರೆ ನೀಡಿದ್ದೇವೆ. ಮುಸ್ಲಿಮರಿಗೋಸ್ಕರ ಇಸ್ಲಾಂನಲ್ಲಿ ಹಲಾಲ್ ಕಟ್ ಇರುವುದು. ಹಿಂದುಗಳಲ್ಲಿ ಅಲ್ಲ. ಹಿಂದುಗಳ ವಿಧಾನದಲ್ಲಿ ಮಾಂಸ, ಕೋಳಿ ಮಾಡುವುದು ಮುಸ್ಲಿಮರು ಹರಾಮ್ ಎಂದು ಹೇಳುತ್ತಾರೆ.

ಹಿಂದೂಗಳ ವಿಧಾನದಲ್ಲಿ ಮಾಡಿದ ಮಾಂಸವನ್ನು ತಿನ್ನಲಾರದ ಮುಸ್ಲಿಮರು ಇರುವಾಗ ನಾವು ಹಿಂದುಗಳೇಕೆ ಅವರು ಮಾಡುವ ಹಲಾಲ್‌ ಕಟ್ ತಿನ್ನಬೇಕು ಎಂದು ಪ್ರಮೋದ್ ಮುತಾಲಿಕ್ ಪ್ರಶ್ನಿಸಿದರು. ಹಲಾಲ್ ನಿಂದಾಗಿ ಒಂದು ಟ್ರಸ್ಟ್‌ಗೆ 2 ಲಕ್ಷ ಕೋಟಿ ಆದಾಯ ಬರುತ್ತಿದೆ. ಇದು ಕೇವಲ ಹಲಾಲ್‌ನಲ್ಲಿ ಬರುತ್ತಿರುವ ದುಡ್ಡು. ಈ ಹಣವನ್ನು ಅವರು ಭಯೋತ್ಪಾದಕ , ಸಮಾಜ ಘಾತುಕ ಕೃತ್ಯಗಳಿಗೆ ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Scroll to Top