ಕಾಣದಂತೆ ಮಾಯವಾಯ್ತು ₹2,000 ಮುಖಬೆಲೆಯ ನೋಟ್; ಸಚಿವೆ ನಿರ್ಮಲಾ ಕೊಟ್ಟ ಅಪ್ಡೇಟ್ ಏನು..?

ಕಳೆದ ಹಲವು ಸಮಯದಿಂದ 2000 ರೂ ನೋಟುಗಳು ಚಲಾವಣೆಯಲ್ಲಿ ಕಾಣಿಸ್ತಾನೇ ಇಲ್ಲ. ಬ್ಯಾಂಕ್‌ನ ಎಟಿಎಂಗಳಲ್ಲೂ 2000 ರೂಪಾಯಿ ನೋಟುಗಳು ಸಿಗ್ತಿಲ್ಲ. ಏನಪ್ಪ ಇದಕ್ಕೆ ಕಾರಣ ಅನ್ನೋ ಚರ್ಚೆ ಬಹುದಿನಗಳಿಂದ ನಡೀತಾ ಇತ್ತು. ಎಟಿಎಂಗಳಲ್ಲಿ 2000 ರೂಪಾಯಿ ನೋಟುಗಳು ಯಾಕೆ ಕಾಣಿಸ್ತಿಲ್ಲ ಅನ್ನೋ ಬಗ್ಗೆ ಇದೀಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ATMಗಳಿಗೆ 2000 ರೂಪಾಯಿ ನೋಟುಗಳನ್ನ ತುಂಬೋಕೆ ಅಥವಾ ತುಂಬದಿರೋಕೆ ಬ್ಯಾಂಕ್​ಗಳಿಗೆ ಯಾವುದೇ ಸೂಚನೆ ನೀಡಿಲ್ಲ ಅಂತ ಹೇಳಿದ್ದಾರೆ. ನವೆಂಬರ್​​ 8, 2016. ಇದು ದೇಶ ಮರೆಯಲಾಗದ ದಿನ. 7 ವರ್ಷಗಳ ಹಿಂದೆ ದೇಶದಲ್ಲಿ 500 ಮತ್ತು 1,000 ರೂಪಾಯಿ ಮುಖಬೆಲೆ ನೋಟುಗಳನ್ನು ನಿಷೇಧಿಲಾಗಿತ್ತು. ಖೋಟಾ ನೋಟು ಹಾವಳಿ ಮತ್ತು ಕಪ್ಪುಹಣ ನಿಯಂತ್ರಣಕ್ಕಾಗಿ ಈ ನಿರ್ಧಾರ ಅಂತ ಕೇಂದ್ರ ಸರ್ಕಾರ ಸಮರ್ಥಿಸಿತ್ತು. ಆದರೆ ನೋಟ್​ ಬ್ಯಾನ್​​ ಬಳಿಕ ಬ್ಯಾಂಕ್​ಗಳ ಮುಂದೆ ಸಾಲುಗಟ್ಟಿ ನಿಂತ ಜನ ಸಂಕಷ್ಟ ಅನುಭವಿಸಿದ್ದರು. ಆ ಬಳಿಕ ಜಾರಿಗೆ ಬಂದದ್ದು ಬಣ್ಣ ಬಣ್ಣದ ನೋಟುಗಳು. ಅದರಲ್ಲೂ ಪಿಂಕ್​​ ನೋಟ್​​ ಮೇಲೆ ಎಲ್ಲರ ಕಣ್ಣು.

ಪಿಂಕ್​​ ಸುಂದರಿ ಕಣ್ಮರೆಗೆ ಸಚಿವೆ ನಿರ್ಮಲಾ ಕೊಟ್ರು ಅಪ್​ಡೇಟ್​​

ಗುಲಾಬಿ ಆಂಕೆ ಜೋ ತೇರಿ ದೇಕೆ ಅಂತ ಹಾಡಾಡ್ಕೊಂಡು ಹಾಡು ಗುನುಗ್ತಿದ್ದವರಿಗೆ ಯಾಕೋ ಹಾಡು ನೆನಪಾಗ್ತಿಲ್ಲ. ಪಿಂಕ್​​ ಸುಂದರಿ ಕಾಣಿಸಿ ವರ್ಷಗಳೇ ಕಳೆದು ಹೋಗಿದೆ. ನೋಟ್​​ ಬ್ಯಾನ್​​​ ಬಳಿಕ ಎಟಿಎಂಗಳಲ್ಲಿ ಹೆಚ್ಚಿಗೆ ಕಂಡಿದ್ದೆ ಈ ಗರಿ ಗರಿ 2,000 ರೂಪಾಯಿ ನೋಟು. ಭಾರತದ ಅತ್ಯಂತ ಮೌಲ್ಯಯುತ ಕರೆನ್ಸಿ ನೋಟು 2,000. ಆದರೆ ಈ ನೋಟುಗಳ ಚಲಾವಣೆ ಸದ್ಯ ತೀವ್ರವಾಗಿ ಕುಸಿದಿದೆ. 500, 1000 ನೋಟುಗಳ ಅಮಾನ್ಯದ ಬಳಿಕ ಕೇಂದ್ರ ಸರ್ಕಾರ 2,000 ರೂಪಾಯಿ ನೋಟುಗಳನ್ನ ಚಲಾವಣೆಗೆ ತಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ನೋಟುಗಳ ಚಲಾವಣೆ ಕಂಡಿದ್ದೆ ಅಪರೂಪ. ಕಾರಣ ಏನು ಅನ್ನೋದರ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​, ಎಟಿಎಂಗಳಲ್ಲಿ 2000 ರೂಪಾಯಿ ನೋಟುಗಳ ಅಲಭ್ಯತೆ ಕುರಿತು ಸ್ಪಷ್ಟನೆ ನೀಡಿದ್ದಾರೆ.

ATMಗಳಿಗೆ 2000 ರೂಪಾಯಿ ನೋಟುಗಳ ತುಂಬಲು, ತುಂಬದಿರುವ ಬಗ್ಗೆ ಬ್ಯಾಂಕ್​ಗಳಿಗೆ ಯಾವುದೇ ಸೂಚನೆ ನೀಡಿಲ್ಲ ಅಂತ ಹೇಳಿದ್ದಾರೆ. ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ಎಟಿಎಂಗಳಿಂದ 2 ಸಾವಿರ ನೋಟುಗಳನ್ನು ವಾಪಸ್ ಪಡೆಯಲಾಗಿತ್ತು. ಬರೀ ಬ್ಯಾಂಕ್ ಗಳಲ್ಲಿ 2 ಸಾವಿರ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿವೆ ಎಂದು ಹೇಳಿದ್ದಾರೆ. ಎಟಿಎಂಗಳಲ್ಲಿ 2 ಸಾವಿರ ಮುಖಬೆಲೆಯ ನೋಟುಗಳನ್ನು ಎಟಿಎಂಗೆ ತುಂಬುವಂತೆ ಬ್ಯಾಂಕ್​ಗಳಿಂದಲೂ ಯಾವುದೇ ಬೇಡಿಕೆ ಬಂದಿಲ್ಲ. ಗ್ರಾಹಕರಿಂದ ಬೇಡಿಕೆ ಬಂದರೆ ಈ ಬಗ್ಗೆ ಬ್ಯಾಂಕ್​ಗಳು ನಿರ್ಧಾರ ಕೈಗೊಳ್ಳಲಿವೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಅದೆಷ್ಟೆ ಸ್ಪಷ್ಟನೆ ಕೊಟ್ಟರು 2000 ನೋಟು ಮುದ್ರಣ ಬಗ್ಗೆ ವಿವರಣೆ ನೀಡಿಲ್ಲ. ಮುದ್ರಣವಾಗ್ತಿದ್ಯಾ? ಆಗ್ತಿಲ್ವಾ? ಬ್ಯಾಂಕ್​​​ ಖಜಾನೆ ಸೇರಿದ ನೋಟುಗಳ ಚಲಾವಣೆ ನಿಂತಿದ್ಯಾಕೆ? ಇಂತಹ ಹಲವು ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡಬೇಕಿದೆ

Scroll to Top