ಕೇಂದ್ರದ ಕೋರಿಕೆ ಮೇರೆಗೆ ಭಾರತದಲ್ಲಿ 122 ಟ್ವಿಟರ್ ಖಾತೆಗಳು ನಿರ್ಬಂಧ…!

ನವದೆಹಲಿ, ಮಾ 25: ಭಾರತ ಸರ್ಕಾರದ ಕೋರಿಕೆ ಮೇರೆಗೆ ಟ್ವಿಟರ್ ದೇಶದಲ್ಲಿ 122 ಖಾತೆಗಳನ್ನು ನಿರ್ಬಂಧಿಸಿದೆ ಎಂದು ವರದಿಯಾಗಿದೆ. ನಿರ್ಬಂಧಿಸಿರುವ ಲಿಸ್ಟ್ ನಲ್ಲಿ ಖಾತೆಗಳು ಪತ್ರಕರ್ತರು, ಲೇಖಕರು, ರಾಜಕಾರಣಿಗಳಿಗೆ ಸೇರಿವೆ.

122 ಖಾತೆಯನ್ನು ಯಾವ ಕಾರಣಕ್ಕೆ ನಿರ್ಬಂಧಿಸಿದೆ ಎಂಬುದರ ಕುರಿತಂತೆ ಮಾಹಿತಿ ಇಲ್ಲ. ಆದರೆ ಪಂಜಾಬ್ ಪೊಲೀಸರು ತೀವ್ರಗಾಮಿ ನಾಯಕ ಮತ್ತು ವಾರಿಸ್ ಪಂಜಾಬ್ ಡಿ ಮುಖ್ಯಸ್ಥ ಅಮೃತಪಾಲ್ ಸಿಂಗ್ ವಿರುದ್ಧ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿರುವ ಹಿನ್ನೆಲೆಯಲ್ಲಿ ನಿರ್ದಂಧ ಹೇರಲಾಗಿದೆ ಎಂಬ ಶಂಕೆ ಇದೆ.

ಇನ್ನು ಅಮೃತಪಾಲ್ ಸಿಂಗ್ ನನ್ನು ಬಂಧಿಸಲು ದೆಹಲಿ ಮತ್ತು ಪಂಜಾಬ್ ಪೊಲೀಸರ ತಂಡಗಳು ಶುಕ್ರವಾರ ದೆಹಲಿ ಮತ್ತು ಅದರ ಗಡಿಯಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿವೆ.

Scroll to Top