ಮದ್ದಡ್ಕ : ಅಪರಿಚಿತ ಮಹಿಳೆಯ ಶವ ನೇಣು ಬಿಗಿದ ರೀತಿ ಪತ್ತೆ

ಮದ್ದಡ್ಕ ಕಿನ್ನಿಗೋಳಿ : ಕಿನ್ನಿಗೋಳಿಯಲ್ಲಿ ಮಹಿಳೆಯ ಶವವೊಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಪರಿಚಿತ ಶವವಾಗಿದ್ದು ಎಲ್ಲರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯರು ನೋಡಿ ಮಾಹಿತಿಯನ್ನು ನೀಡಿದ್ದಾರೆ.

ಒಂದು ತಿಂಗಳ ಹಿಂದೆಯೇ ಇದು ಘಟನೆ ನಡೆದಿದೆ ಅನ್ನುವುದು ಬೆಳಕಿಗೆ ಬಂದಿದ್ದು ಮಂಗಳೂರಿನಿಂದ ಗುರುವಾಯನಕೆರೆಗೆ ಮಾಡಿರುವ ಟಿಕೆಟ್ ಮಾಹಿತಿ ತಿಳಿದು ಬಂದಿದೆ. ಸ್ಥಳೀಯರು ಈ ಸ್ಥಳಕ್ಕೆ ಹೋಗುವ ವೇಳೆ ಕೊಳೆತ ವಾಸನೆಯ ಜತೆಗೆ ಈ ದೃಶ್ಯವನ್ನು ಕಂಡಿದ್ದಾರೆ ಎನ್ನಲಾಗಿದೆ.

ಇನ್ನು ಶವ ಯಾರದ್ದು ಎಂದು ಪತ್ತೆಯಾಗದಷ್ಟರ ಮಟ್ಟಿಗೆ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ.

You cannot copy content from Baravanige News

Scroll to Top