ಯುವಕ-ಯುವತಿಯರ ಹೋಳಿ ಆಚರಣೆ; ಬಜರಂಗದಳ ಕಾರ್ಯಕರ್ತರಿಂದ ದಾಳಿ..!!

ಮಂಗಳೂರು, ಮಾ.27: ಮರೋಳಿ ಎಂಬಲ್ಲಿ ಯುವಕ ಯುವತಿಯರು ಹೋಳಿ ಆಚರಣೆ ನಡೆಸುತ್ತಿದ್ದ ವೇಳೆ ಬಜರಂಗದಳದ ಕಾರ್ಯಕರ್ತರು ಹಾಗೂ ಸ್ಥಳೀಯರು ದಾಳಿ ನಡೆಸಿ ಅಡ್ಡಿಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಮರೋಳಿಯ ‘ಸೂರ್ಯ ವುಡ್ಸ್ ‘ನಲ್ಲಿ ಅರ್ಜುನ್ ಎಂಬವರು ಹೋಳಿ ಆಚರಣೆಗೆ ಅನುಮತಿ ಪಡೆದಿದ್ದರು. ನಿನ್ನೆ ಮಧ್ಯಾಹ್ನ ಕೆಲ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಹೋಳಿ ಆಚರಣೆಯಲ್ಲಿ ತೊಡಗಿದ್ದರು. ಈ ವೇಳೆ ಬಜರಂಗದಳದವರು ದಾಳಿ ನಡೆಸಿ ಅಡ್ಡಿಪಡಿಸಿದರು.

ಕಾರ್ಯಕ್ರಮಕ್ಕೆ ಅಳವಡಿಸಿದ್ದ ಬ್ಯಾನರ್ ಗಳನ್ನು ಹರಿದು ಹಾಕಿದರು. ವಿದ್ಯಾರ್ಥಿಗಳು ತುಂಡುಡುಗೆ ತೊಟ್ಟಿದ್ದಕ್ಕೆ ಹಾಗೂ ಧ್ವನಿವರ್ಧಕ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕಾರ್ಯಕ್ರಮ ಆಯೋಜಕರು ಹಾಗೂ ಬಜರಂಗದಳ ಕಾರ್ಯಕರ್ತರ ನಡುವೆ ಮಾತಿನ ಚಕ್ಕಮಕಿಯು ನಡೆಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಸ್ಥಳಕ್ಕೆ ಕಂಕನಾಡಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಿಂದ ನೊಂದ ಆಯೋಜಕರು ಕಾರ್ಯಕ್ರಮವನ್ನೇ ರದ್ದು ಪಡಿಸಿದ್ದಾರೆ.

Baravanige News

Translate »

You cannot copy content from Baravanige News

Scroll to Top