ಕುಂದಾಪುರ: ಬೈಕ್ ನಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ13 ಲಕ್ಷ ನಗದು ವಶಕ್ಕೆ

ಕುಂದಾಪುರ ಮಾ.29 : ಯಾವುದೇ ದಾಖಲೆಗಳಿಲ್ಲದೆ ಬೈಕ್ ನಲ್ಲಿ ಸಾಗಿಸುತ್ತಿದ್ದ 13 ಲಕ್ಷ ರೂ. ನಗದನ್ನು ಕುಂದಾಪುರ ನಗರದ ಸಂಗಮ್ ಜಂಕ್ಷನ್ ಬಳಿ ಇಂದು ಮುಂಜಾನೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಕುಂದಾಪುರ ಪೊಲೀಸರು ನಗರದ ಅನೇಕ ಕಡೆಗಳಲ್ಲಿ ತಪಾಸಣೆಯನ್ನು ಕೈಗೊಂಡಿದ್ದು ಇಂದು ಮುಂಜಾನೆ 5.30ರ ವೇಳೆಗೆ ಕುಂದಾಪುರ ನಗರದ ಸಂಗಮ್ ಜಂಕ್ಷನ್ ಬಳಿ ಕೋಟೇಶ್ವರ ನಿವಾಸಿಯಾದ ದೀಲಿಪ್ ಗೋಡ್ಲೆ ಎಂಬವರು ಕೋಟೇಶ್ವರದಿಂದ ಬೈಂದೂರು ಕಡೆ ಚಲಿಸುತ್ತಿದ್ದ ಬೈಕ್ ನ್ನು ತಡೆದು ಪರಿಶೀಲಿಸಿದಾಗ ಬೈಕ್ ನ ಹಿಂಬದಿಯ ಬಾಕ್ಸ್ ನಲ್ಲಿ ಬಟ್ಟೆಯ ಚೀಲದಲ್ಲಿ 500 ರೂ. ಮುಖಬೆಲೆಯ 13 ಲಕ್ಷ ರೂ. ನಗದು ಕಂಡು ಬಂದಿದೆ.

ಈ ಹಣಕ್ಕೆ ಯಾವುದೇ ದಾಖಲೆಗಳು ಇಲ್ಲದಿರುವುದರಿಂದ 13 ಲಕ್ಷ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ಬೆಳ್ಳಿಯಪ್ಪ ನವರ ಮಾರ್ಗದರ್ಶನದಲ್ಲಿ ಕುಂದಾಪುರ ಠಾಣಾ ನಿರೀಕ್ಷಕರಾದ ನಂದಕುಮಾರರವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

You cannot copy content from Baravanige News

Scroll to Top