ಉಡುಪಿ : ಕುಡಿದು ಮಲಗಿದ್ದ ವ್ಯಕ್ತಿಯನ್ನು ಎಬ್ಬಿಸಿ ಉಪಚರಿಸಿ ಮಾನವೀಯತೆ ಮೆರೆದ ಡಿಸಿ, ಎಸ್‌ಪಿ

ಕಾಪು (ಮಾ.30): ಮದ್ಯಪಾನ ಮಾಡಿ ರಾ. ಹೆ. 66ರಲ್ಲಿ ಮಲಗಿದ್ದ ವ್ಯಕ್ತಿಯೋರ್ವನನ್ನು ಎಬ್ಬಿಸಿ, ಉಪಚರಿಸುವ ಮೂಲಕ ಉಡುಪಿ ಡಿಸಿ ಮತ್ತು ಎಸ್‌ಪಿ ಮಾನವೀಯತೆ ಮೆರೆದಿದ್ದಾರೆ.


ಉಡುಪಿ ಡಿಸಿ ಕೂರ್ಮಾ ರಾವ್‌ ಮತ್ತು ಎಸ್‌ಪಿ ಹಾಕೆ ಅಕ್ಷಯ್‌ ಮಚ್ಚೀಂದ್ರ ತಮ್ಮ ವಾಹನಗಳಲ್ಲಿ ಉಡುಪಿಯಿಂದ ಹೆಜಮಾಡಿ ಕಡೆಗೆ ತೆರಳುತ್ತಿದ್ದ ವೇಳೆ ಎರ್ಮಾಳು ಬಳಿ ಹೆದ್ದಾರಿಯಲ್ಲಿ ವ್ಯಕ್ತಿಯೊಬ್ಬ ಮಲಗಿದ್ದನ್ನು ಗಮನಿಸಿದ್ದರು.

ವಾಹನ ನಿಲ್ಲಿಸಿ ಆತನ ಬಳಿಗೆ ಬಂದ ಅವರು ಎಬ್ಬಿಸಿ ಅಂಗರಕ್ಷಕ ಸಿಬ್ಬಂದಿ ಮತ್ತು ಸ್ಥಳೀಯರ ಸಹಕಾರದೊಂದಿಗೆ ರಸ್ತೆ ಬದಿಗೆ ಕರೆ ತಂದು ಉಪಚರಿಸಿದರು. ಬಳಿಕ ಹೈವೇ ಪೆಟ್ರೋಲ್‌ ಪೊಲೀಸರ ಮೂಲಕ ಆತನ ಮನೆಯವರನ್ನು ಸಂಪರ್ಕಿಸಿ, ಕರೆದೊಯ್ಯುವ ವ್ಯವಸ್ಥೆ ಮಾಡಿದರು. ಈ ಮಾನವೀಯ ನಡೆ ಪ್ರಶಂಸೆಗೆ ಪಾತ್ರವಾಗಿದೆ.

You cannot copy content from Baravanige News

Scroll to Top